ಮತ್ತೊಮ್ಮೆ ಮೋದಿಗಾಗಿ ಉತ್ಸಾಹಿ ಯುವಕರು ಬಿಜೆಪಿಗೆ ಸೇರ್ಪಡೆ




ನರೇಂದ್ರಮೋದಿ ಸರ್ಕಾರದ ಆಡಳಿತದ ಕಾರ್ಯವೈಖರಿಗಳನ್ನು ಮೆಚ್ಚಿ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಯುವಕ ಮಿತ್ರರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಭಾರಿ ಸಚ್ಚಿದಾನಂದಮೂರ್ತಿ ಸಮ್ಮುಖದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಚ್ ಎಸ್ ಶಿವಶಂಕರ್ ನೇತೃತ್ವದಲ್ಲಿ ಬಿಜೆಪಿಗೆ ಯುವಕರು ಸೇರ್ಪಡೆಯಾದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಶಂಕರ್, ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜು, ನಗರಸಭಾ ಮಾಜಿ ಅಧ್ಯಕ್ಷ ಕೆ.ಬಿ ಮುದ್ದಪ್ಪ, ಹೊಸಕೋಟೆ ಮುಖಂಡರಾದ ಸುಬ್ಬಣ್ಣ, ಶ್ರೀನಿವಾಸ್, ಹಾಗೂ ಬಿಜೆಪಿ ಜಿಲ್ಲಾ ಮೋರ್ಚಾ ಉಪಾಧ್ಯಕ್ಷ ಶಿವು, ಯುವ ಮುಖಂಡ ಅರವಿಂದ್, ಸತೀಶ್. ಅಜಯ್ ಹಾಗೂ ಇನ್ನೂ ಮುಂತಾದ ಕಾರ್ಯಕರ್ತರು ಯುವಕ ಮಿತ್ರರು ಉಪಸ್ಥಿತರಿದ್ದರು.
Comments