ಸ್ವಾಭಿಮಾನದಿಂದ ಬದುಕಬೇಕಾದ ಒಂದು ರಾಷ್ಟ್ರಕ್ಕೆ ಇದಕ್ಕಿಂತ ಅವಮರ್ಯಾದೆ ಹಾಗೂ ಇದಕ್ಕಿಂತ ವಿನಾಶಕಾರಿ ಪರಿಸ್ಥಿತಿ ಮತ್ತೊಂದಿದೆಯೇ?

11 Mar 2019 6:00 PM |
82 Report

ಕಾಂಗ್ರೆಸ್ಸಿನ ದುರಾಡಳಿತದ ಅವಧಿಯಲ್ಲಿ ನಾವು 47 ಟನ್ ಬಂಗಾರವನ್ನು ಅಡವಿಟ್ಟು ಕೇವಲ 40 ಕೋಟಿ ಸಾಲ ಪಡೆದಿದ್ದೆವು! ಇದು ಅಂದಿನ ಭಾರತದ ಆರ್ಥಿಕ ಪರಿಸ್ಥಿತಿ ಆಗಿತ್ತು. 90 ರ ದಶಕದ ಆರಂಭದ ದಿನಗಳಲ್ಲಿ ಭಾರತದಂತಹ ಒಂದು ಬೃಹತ್ ರಾಷ್ಟ್ರವು ತನ್ನ ಬಳಿಯಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ಪರಿಸ್ಥಿತಿಯಲ್ಲಿತ್ತು. ರಾಜೀವ್ ಗಾಂಧಿಯವರ ಆಳ್ವಿಕೆಯಲ್ಲಿ, ಭಾರತದ ಖಜಾನೆ ಖಾಲಿಯಾಗಿತ್ತು ಮತ್ತು....LTTE ಉಗ್ರರ ದಾಳಿಯಲ್ಲಿ ಅವರ ಹತ್ಯೆ ನಡೆದುಹೋಯಿತು....ಅದಾದನಂತರ, ಚಂದ್ರಶೇಖರ್ ಪ್ರಧಾನಿಯಾದರು.....ತಿಜೋರಿ ಬರಿದಾಗಿತ್ರು. ಅವರಿಗೆ ಬಹಳ ಆತಂಕವಾಯಿತು, ಏನು ಮಾಡಬೇಕೆಂಬುದೇ ಅವರಿಗೆ ತೋಚಲಿಲ್ಲ. ಇಡೀ ದೇಶದಲ್ಲಿ ಆಗ ಬಹಳ ಹತಾಶ ವಾತಾವರಣ ಮುಸುಕಿತ್ತು.

ರಾಜೀವ್ ಗಾಂಧಿಯವರು ಉದ್ಯೋಗ ಸೃಷ್ಟಿಗಾಗಿ ಯಾವ ಯೋಜನೆಗಳನ್ನೂ ಮಾಡಿರಲಿಲ್ಲ. ಹೊಸಾ ಉದ್ಯಮ ಶುರುಮಾಡುವುದು ಎಂದರೆ ಅಷ್ಟು ಸುಲಭವಿರಲಿಲ್ಲ; ಉದ್ಯಮ ಕ್ಷೇತ್ರಕ್ಕೆ ಬರಬೇಕು ಎಂದರೆ ಐವತ್ತು ಕಡೆಯಿಂದ NOC ತರಬೇಕಿತ್ತು. ಕಾಂಗ್ರೆಸ್ ನವರ ಲೈಸೆನ್ಸ್ ಪರ್ಮಿಟ್ ನಿಯಮಗಳ ಸುಳಿಯಲ್ಲಿ ಇಡೀ ವ್ಯವಹಾರ ಕ್ಷೇತ್ರ ತನ್ನ ಉತ್ಸಾಹವನ್ನು ಕಳೆದುಕೊಂಡು ನಿರಾಶಾವಾದಿಯಾಗಿ ಹೋಗಿತ್ತು. ಇನ್ನೊಂದು ಕಡೆ, ಮಂಡಲ್ ಹೋರಾಟ ಕಂಡಲ್ ಹೋರಾಟ ಇತ್ಯಾದಿಗಳು ದೇಶದ ತುಂಬಾ ಹರಡಿದ್ದವು.1980 ರಿಂದ 1990 ರವರೆಗೆ, ಕಾಂಗ್ರೆಸ್ ಸರ್ಕಾರವು ಆರ್ಥಿಕತೆಗೆ ಪೂರ್ಣ ವಿರಾಮ ಹಾಕಿ ಕುಳಿತಿತ್ತು. ಇದೇ ಹೊತ್ತಿನಲ್ಲೇ ಬೊಫೋರ್ಸ್ ದಲ್ಲಾಳಿ ವ್ಯವಹಾರದ ಹಗರಣ ಬಯಲಿಗೆ ಬಂತು.

ಗಾಂಧಿ ಕುಟುಂಬದವರು ಎಗ್ಗಿಲ್ಲದೆ ದೇಶವನ್ನು ಲೂಟಿ ಹೊಡೆದು, ದೇಶದ ಎಕಾನಮಿಯನ್ನು ರಸಾತಳ ತಲುಪುವಂತೆ ಮಾಡಿದರು. ಆ ದಿನಗಳಲ್ಲಿ ಭಾರತದ ವಿದೇಶ ವಿನಿಮಯ ನಿಧಿ ಎಷ್ಟು ಕಡಿಮೆ ಇತ್ತೆಂದರೆ, ನಮ್ಮ ದೇಶದ ರಿಸರ್ವ್ ಬ್ಯಾಂಕು ತನ್ನಲ್ಲಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ತೀರ್ಮಾನಕ್ಕೆ ಬಂದಿತ್ತು. ಪರಿಸ್ಥಿತಿ ಹೇಗಿತ್ತೆಂದರೆ, ನಮಗೆ ಸಾಲವಾಗಿ ಬರಲಿದ್ದ ಹಣದ ಮೌಲ್ಯ ನಮ್ಮಲ್ಲಿನ ಕೇವಲ 15 ದಿನಗಳವರೆಗಿನ ರಿಸರ್ವ್ ಮೌಲ್ಯಕ್ಕೆ ಸಾಕಾಗುವಷ್ಟಿತ್ತು. ಆಗ ಪ್ರಧಾನಿ ಚಂದ್ರಶೇಖರ್ ಅವರ ಆಜ್ಞೆಯಂತೆ, ಭಾರತವು ತನ್ನಲ್ಲಿದ್ದ 47 ಟನ್ (47 ಸಾವಿರ ಕೆಜಿ!) ಬಂಗಾರವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಬಳಿಯಲ್ಲಿ ಒತ್ತೆ ಇಡಲು ಒಪ್ಪಿಕೊಂಡಿತು.......ಬಹಳ ಆಶ್ಚರ್ಯಕರವೂ,  ಹಾಗೂ ಮುಜುಗರ ತರುವಂಥದ್ದೂ ಆದ ಈ ಘಟನೆ ಪತ್ರಿಕೆಗಳಲ್ಲೂ ವರದಿಯಾಯಿತು. ಆಗಿನ ಆ ಸಂದರ್ಭದಲ್ಲಿ ಈಗಿನಂತೆ ಮೊಬೈಲ್ ಗಳಾಗಲಿ, ಇಂಟರ್ ನೆಟ್ ಆಗಲೀ ಇರಲಿಲ್ಲ. ಲ್ಯಾಂಡ್ ಲೈನ್ ಫೋನು ಇದ್ದರೂ ಸಹಾ, ಬಹಳ ಮಿತವಾಗಿ ಬಳಕೆಯಲ್ಲಿತ್ತು. 

ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎಂದರೆ, ರಿಸರ್ವ್ ಬ್ಯಾಂಕಿನ ಕಟ್ಟಡದಿಂದ ಚಿನ್ನವನ್ನು ಇಂಗ್ಲೆಂಡಿಗೆ ಹೋಗುವ ಹಡಗಿಗೆ, ವ್ಯಾನಿನಲ್ಲಿ ಸಾಗಿಸಬೇಕಾದ ದೈನೇಸಿ ಸ್ಥಿತಿ ಬಂದೊದಗಿತ್ತು! 47 ಟನ್ ಚಿನ್ನವನ್ನು RBI ಗೆ ಸೇರಿದ ಹಳೆಯ ವ್ಯಾನೊಂದರಲ್ಲಿ, ಇಬ್ಬರು ಸೆಕ್ಯುರಿಟಿ ಗಾರ್ಡುಗಳ ರಕ್ಷಣೆಯಲ್ಲಿ ಇಂಗ್ಲೆಂಡಿಗೆ ಹೊರಟು ನಿಂತ ಹಡಗಿಗೆ ಸಾಗಿಸಲಾಯಿತು.ಆ ವ್ಯಾನು ಎಷ್ಟು ಹಳೆಯದೆಂದರೆ, ದಾರಿಯ ಮಧ್ಯದಲ್ಲಿ ಅದರ ಎರಡೂ ಚಕ್ರಗಳು ಪಂಕ್ಚರ್ ಕೂಡಾ ಆದವು! ಅಷ್ಟೇ ಅಲ್ಲ, 47 ಟನ್ ಚಿನ್ನ ಹೊತ್ತಿದ್ದ ಈ ವ್ಯಾನಿನ ರಕ್ಷಣೆಗೆ ಬಂದಿದ್ದವರು ಕೇವಲ ಇಬ್ಬರು ಪಾಪದ ಸೆಕ್ಯುರಿಟಿ ಗಾರ್ಡುಗಳು!!!

ಇಷ್ಟೆಲ್ಲಾ ಪ್ರಯತ್ನಗಳ ನಂತರ, ಅಂತೂ ಬಂಗಾರ ಇಂಗ್ಲೆಂಡ್ ತಲುಪಿತು ಮತ್ತು ಇಂಗ್ಲೆಂಡು ನಮಗೆ 40.05 ಕೋಟಿಗಳಷ್ಟು ಹಣವನ್ನು ಸಾಲ ಕೊಡಮಾಡಿತು. ಭಾರತದ ಏಕಾನಮಿಗೆ ಸಂಬಂಧಪಟ್ಟ ಈ ವಿಷಾದಕರ ಪ್ರಸಂಗವನ್ನು ನೆನಪಿಸುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು.  ಕಾರಣವಿಷ್ಟೇ, ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದ್ದಾನೆ ಎಂದು ಮೋದಿಯನ್ನು ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಿರುವ ನಾಚಿಕೆಯಿಲ್ಲದ ಕಾಂಗ್ರೆಸ್ಸಿನ ನಾಯಕರಿಗೆ ಮೇಲೆ ನಾನು ಹೇಳಿದಂತಹ ಎಲ್ಲ ವಿಷಯಗಳೂ ಗೊತ್ತಿವೆ.  ನಮ್ಮ ಈ ದಾರಿದ್ರದ ಆರ್ಥಿಕ ಪರಿಸ್ಥಿತಿಗೆ ಗಾಂಧಿ ಕುಟುಂಬದ ಕೊಡುಗೆ ಏನು ಎಂಬುದು ಅವರಿಗೆ ತಿಳಿದಿದೆ....ಈ ಒಂದು ಕುಟುಂಬದ ಸಲುವಾಗಿ, ಕೇವಲ 40 ಕೋಟಿ ಸಾಲಕ್ಕೆ ಇಡೀ ದೇಶದ 47 ಟನ್ ಚಿನ್ನ ಒತ್ತೆ ಇಡಬೇಕಾದ ಪರಿಸ್ಥಿತಿ ಬಂದಿತ್ತು ಎಂಬುದೂ ಸಹಾ ಅವರು ಅರಿಯದ ವಿಷಯವಲ್ಲ. 

ಬರಿಯ 40 ಕೋಟಿಗಾಗಿ ಇಡೀ ದೇಶವನ್ನೇ ಅಡವಿಟ್ಟ ಜನ ಇವತ್ತು ಮೋದಿ ನಮ್ಮ ಅರ್ಥವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾನೆ ಎಂದಾಗ ನನಗೆ ಮೈ ಉರಿದುಹೋಯಿತು. ಹಿಂದೂಸ್ಥಾನದ 70 ವರ್ಷಗಳ ಇತಿಹಾಸದಲ್ಲಿ, ಕೇವಲ ಮೂರು ಅವಧಿಗಳಲ್ಲಿ ಮಾತ್ರ ನಾವು ವಿಶ್ವ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದೆ ಸರ್ಕಾರ ನಡೆಸಿದ್ದೇವೆ. ಅವು ಯಾವುವೆಂದರೆ; 

2015-16, 2016-17, 2017-18 ಈ ಮೂರೂ ವರ್ಷಗಳು ಒಬ್ಬ ಚಾಯ್ ವಾಲಾ ನಡೆಸಿದ ಸರ್ಕಾರಕ್ಕೆ ಸೇರಿದವು. 

ರಿಸರ್ವ್ ಬ್ಯಾಂಕ್ ಇಂಡಿಯಾದ ಮಾಜಿ ಗವರ್ನರ್ ವೈ ವಿ ರೆಡ್ಡಿಯವರ "ADVISE AND DISSENT" ಪುಸ್ತಕದ ಕೆಲವು ಭಯಾನಕ ಸತ್ಯಗಳು!

Edited By

Ramesh

Reported By

Ramesh

Comments