ಈಗಿಂದೀಗಲೇ ಮೂರ್ತಿ ಪೂಜೆ ನಿಲ್ಲಿಸಲು ಸಿದ್ಧ. ನಿಮಗೆ ಅದರಿಂದ ಅವಲಂಬಿತವಾಗಿರುವವರ ಅಷ್ಟು ಉದ್ಯೋಗಗಳನ್ನು ಸೃಷ್ಟಿಸುವ ತಾಕತ್ತಿದೆಯೇ?

11 Mar 2019 5:50 PM |
273 Report

ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಮೂರ್ತಿಪೂಜಕರು. ಆದರೆ ಇದೇ ದೇಶದ ಬುದ್ದಿಜೀವಿಗಳ, ವಿಚಾರವಾದಿಗಳ, ಕಮ್ಯುನಿಸ್ಟರ, ಪ್ರಗತಿಪರ ಕಾವಿಧಾರಿ ಸ್ವಾಮಿಗಳ, ಹಿಂದೂವಾಗಿ ಹುಟ್ಟಬೇಕೆಂದು ಅರ್ಜಿ ಹಾಕಿರಲಿಲ್ಲ ಎನ್ನುವ ಜಾತ್ಯತೀತ ರಾಜಕಾರಣಿಗಳ, ದೇವರ ಹೆಸರನ್ನೇ ಇಟ್ಟುಕೊಂಡು ಅದೇ ದೇವರನ್ನು ಬಯ್ಯುವ ತಮ್ಮ ರಕ್ತದ ಪರಿಚಯವೇ ಇಲ್ಲದ ಪ್ರಗತಿಪರರೆಂದು ಹೇಳಿಕೊಳ್ಳುವವರ ಹಿಂಬಾಲಕರ ಪ್ರಕಾರ ಮೂರ್ತಿ ಪೂಜೆ ಒಂದು ಮೌಢ್ಯ. ಮೂರ್ತಿ ಪೂಜೆ ಇತರರನ್ನು ಶೋಷಿಸಲೆಂದು ಪುರೋಹಿತಶಾಹಿಗಳು ಹುಟ್ಟುಹಾಕಿದ ಆಚರಣೆ!

ಮೂರ್ತಿ ಪೂಜೆಯಿಂದಲೇ ಈ ದೇಶ ನಡೆಯುತ್ತಿರುವುದು. ಮೂರ್ತಿ ಪೂಜೆಯಿಂದಲೇ ಬ್ರಾಹ್ಮಣರಷ್ಟೇ ಅಲ್ಲದೆ ಈ ದೇಶದ ಎಲ್ಲಾ ಜಾತಿ ಧರ್ಮಗಳ ಕೋಟ್ಯಂತರ ಜನ ಬದುಕುತ್ತಿರುವುದು. ಅನುಮಾನವಿದ್ದರೆ ಒಂದೇ ಒಂದು ನಿಮಿಷ ದೇವಾಲಯಗಳಿಲ್ಲದ ಈ ದೇಶವನ್ನು ನೆನೆಸಿಕೊಳ್ಳಿ. ಆಗ ನಿಮಗೂ ಅರ್ಥವಾಗಬಹುದು. ಹೌದು ಈ ದೇಶ ನಿಂತಿರುವುದೇ ದೇವಾಲಯಗಳಿಂದ ಮತ್ತು ಮನೆ ಮನೆಯ ದೇವರ ಕೋಣೆಗಳಿಂದ. ಈ ದೇಶದಲ್ಲಿ ಬ್ರಾಹ್ಮಣರು, ದಲಿತರೂ ಸೇರಿದಂತೆ ಸುಮಾರು ಒಂದು ಕೋಟಿ ಜನ ದೇವಾಲಯಗಳಲ್ಲಿ ಮೂರ್ತಿ ಪೂಜೆ ಮಾಡುವುದನ್ನೇ ಉದ್ಯೋಗವಾಗಿಸಿಕೊಂಡಿದ್ದಾರೆ. ಅವರ ಅವಲಂಬಿತರ ಸಂಖ್ಯೆ ಸರಾಸರಿ ಐದು.  ಅಲ್ಲಿಗೆ ಒಟ್ಟು ಐದು ಕೋಟಿ ಜನ ನೇರವಾಗಿ ಮೂರ್ತಿ ಪೂಜೆ ಮಾಡುವ ಮುಖಾಂತರ ಬದುಕು ಕಂಡುಕೊಂಡಿದ್ದಾರೆ. ದೇವಾಲಯಗಳಲ್ಲಿ,ದೇವರ ಉತ್ಸವಗಳಲ್ಲಿ ಪ್ರಸಾದ ತಯಾರಿಸುವ ಕಾರ್ಯದಲ್ಲಿ ಸುಮಾರು ಎರಡು ಕೋಟಿ ಜನ ತೊಡಗಿಸಿಕೊಂಡಿದ್ದಾರೆ. ಅವರ ಒಟ್ಟು ಅವಲಂಬಿತರ ಸಂಖ್ಯೆ ಸರಾಸರಿ ಐದು. ಅಲ್ಲಿಗೆ ಮೂರ್ತಿ ಪೂಜೆ ನಡೆಯುವ ಸ್ಥಳಗಳಲ್ಲಿ ಪ್ರಸಾದ ತಯಾರಿಸುವ ಉದ್ಯೋಗದಿಂದಲೇ ಸುಮಾರು ಹತ್ತು ಕೋಟಿ ಜನ ತಮ್ಮ ಜೀವನ ಕಂಡುಕೊಂಡಿದ್ದಾರೆ.

ಈ ದೇಶದಲ್ಲಿ ಸರಿಸುಮಾರು ಐದು ಕೋಟಿ ಜನ ಪ್ರಮುಖ ದೇವಾಲಯಗಳೂ ಸೇರಿದಂತೆ ದೇಶದ ಎಲ್ಲಾ ದೇವಾಲಯಗಳ ಮುಂಭಾಗದಲ್ಲಿ ಹೂವು, ಹಣ್ಣು ಮತ್ತಿತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ, ಊದಿನ ಕಡ್ಡಿ, ಕರ್ಪೂರ ಮತ್ತಿತರ ಸಾಮಗ್ರಿಗಳನ್ನು ತಯಾರಿಸುವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅವರ ಅವಲಂಬಿತರ ಸಂಖ್ಯೆ ಸರಾಸರಿ ನಾಲ್ಕು. ಅಲ್ಲಿಗೆ ಒಟ್ಟು ಇಪ್ಪತ್ತು ಕೋಟಿ ಜನ ಮೂರ್ತಿ ಪೂಜಾ ಸಾಮಗ್ರಿಗಳ ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ದೇಶದ ಪ್ರಮುಖ ದೇವಾಲಯಗಳ ಊರಿನಲ್ಲಿ ಪ್ರವಾಸಿಗರಿಗೆ ದೇವರ ವಿಗ್ರಹಗಳು, ಗೊಂಬೆಗಳು, ಬಳೆ, ಸರ, ಬಿಂದಿ ಮುಂತಾದ ಸಾಮಗ್ರಿಗಳನ್ನು ಮಾರುವ ಅಂಗಡಿಗಳನ್ನಿಟ್ಟುಕೊಳ್ಳುವ ಮೂಲಕ ದೇವರ ವಿಗ್ರಹಗಳ, ದೇವರ ಫೋಟೋಗಳ, ದೇವಾಲಯಗಳ ಸಮೀಪ ಯಾತ್ರಿಕರಿಗೆ ಮಾರಾಟವಾಗುವ ಬಲೂನು, ಮಕ್ಕಳ ಆಟಿಕೆ ಸೇರಿದಂತೆ ಹಲವು ಸಾಮಗ್ರಿಗಳ ತಯಾರಿಸುವ ಮೂಲಕ, ಹೋಟೆಲ್ ಹಾಗೂ ವಸತಿ ಗೃಹಗಳಲ್ಲಿ ಕೆಲಸ ಮಾಡುವ ಮೂಲಕ ಸುಮಾರು ಏಳು ಕೋಟಿ ಜನ ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ. ಅವರ ಅವಲಂಬಿತರ ಸಂಖ್ಯೆ ಸರಾಸರಿ ಐದು. ಅಲ್ಲಿಗೆ ಮೂವತ್ತೈದು ಕೋಟಿ ಜನ ಮೂರ್ತಿ ಪೂಜೆಗೆ ಬರುವ ಪ್ರವಾಸಿಗರಿಂದ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.

ದೇವಾಲಯಗಳಲ್ಲಿ ಮೂರ್ತಿ ಪೂಜೆಗೆ ಬೇಕಾದ ಹೂವು,ಹಣ್ಣು, ಕಾಯಿ ಮತ್ತಿತರ ಬೆಳೆಗಳನ್ನು ಬೆಳೆಯುವ ಮೂಲಕ ದೇವಾಲಯಗಳ ಅನ್ನ ದಾನಕ್ಕೆ ಬೇಕಾಗುವ ಅಕ್ಕಿ ತರಕಾರಿ ಮತ್ತಿತರ ಬೆಳೆಗಳನ್ನು ಬೆಳೆಯುವ ಮತ್ತು ಮಾರುವ ಕೆಲಸದಲ್ಲಿ ಈ ದೇಶದ ಸುಮಾರು ಏಳು ಕೋಟಿ ರೈತರು ತೊಡಗಿಸಿಕೊಂಡಿದ್ದಾರೆ. ಅವರ ಒಟ್ಟು ಅವಲಂಬಿತರ ಸಂಖ್ಯೆ ಸರಾಸರಿ ಐದು. ಅಲ್ಲಿಗೆ ಸುಮಾರು ಮೂವತ್ತೈದು ಕೋಟಿ ಜನ ಈ ದೇಶದಲ್ಲಿ ದೇವರ ಪೂಜೆಗೆ, ಹಾಗೂ ದೇವಾಲಯಗಳಿಗೆ ಬೇಕಾದ ಹೂವು, ಹಣ್ಣು, ಕಾಯಿ ಮತ್ತಿತರ ಬೆಳೆಗಳ ಮೂಲಕ ತಮ್ಮ ಬದುಕು ಉತ್ತಮಗೊಳಿಸಿಕೊಂಡಿದ್ದಾರೆ. ಮೂರ್ತಿ ಪೂಜೆ ಮಾಡುವ ಪ್ರವಾಸಗಳಿಂದಲೇ ಈ ದೇಶದ ಪ್ರವಾಸೋದ್ಯಮ ನಿಂತಿದೆ. ಭಕ್ತಾದಿಗಳ ಪ್ರವಾಸಕ್ಕೆ ಬೇಕಾಗುವ ಕಾರು, ಬಸ್ಸು, ಆಟೋ ಸೇರಿದಂತೆ ಎಲ್ಲಾ ವಾಹನಗಳನ್ನು ಒದಗಿಸುವ, ಓಡಿಸುವ, ಅವುಗಳ ರಿಪೇರಿ ಕೆಲಸ ಮಾಡುವ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಸುಮಾರು ಮೂರು ಕೋಟಿ. ಅವರ ಅವಲಂಬಿತರ ಸಂಖ್ಯೆ ಐದು. ಅಲ್ಲಿಗೆ ಮೂರ್ತಿ ಪೂಜಕರ ಪ್ರವಾಸಕ್ಕೆ ಬೇಕಾಗುವ ವಾಹನ ಸೇವೆಗಳಿಂದಲೇ ಸುಮಾರು ಹದಿನೈದು ಕೋಟಿ ಜನ ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ.

ಮೂರ್ತಿ ಪೂಜಕರ ದೇವಾಲಯಗಳನ್ನು ಒಳಗೊಂಡು ಮುಜರಾಯಿ ಇಲಾಖೆ, ದೇವಸ್ವಂ ಮಂಡಳಿ ಮುಂತಾದ ಹೆಸರಿನಲ್ಲಿ ಸರ್ಕಾರಗಳು ತನ್ನದೇ ಇಲಾಖೆಗಳನ್ನು ರಚಿಸಿಕೊಂಡಿದೆ. ಇಡೀ ದೇಶದಲ್ಲಿ ಅಂತಹಾ ಇಲಾಖೆಗಳ ಅಡಿಯಲ್ಲಿ ಸುಮಾರು ಒಂದು ಕೋಟಿ ಜನ ಕೆಲಸ ಮಾಡುತ್ತಿದ್ದಾರೆ. ಅವರ ಒಟ್ಟು ಅವಲಂಬಿತರ ಸಂಖ್ಯೆ ಸರಾಸರಿ ಐದು. ಅಲ್ಲಿಗೆ ಮೂರ್ತಿಪೂಜಕರಿಂದಲೇ ನೇರವಾಗಿ ಸುಮಾರು ಐದು ಕೋಟಿ ಜನ ಸರ್ಕಾರೀ ಹಣದಲ್ಲಿ ಬದುಕುತ್ತಿದ್ದಾರೆ.  ಮೂರ್ತಿ ಪೂಜಕರನ್ನು ಬಯ್ಯುವುದರಿಂದಲೇ ಈ ದೇಶದಲ್ಲಿ ಸುಮಾರು ಜನ ಬುದ್ದಿಜೀವಿಗಳು ಹೆಸರು ಗಳಿಸಿ, ಆ ಹೆಸರಿನಿಂದ ಹಣ ಗಳಿಸಿ ಆ ಹಣದಿಂದ ತಮ್ಮ ಪತ್ನಿಯರು, ಉಪ ಪತ್ನಿಯರು ಹಾಗೂ ಮಕ್ಕಳಿಗೆ ಒಳಉಡುಪೂ ಸೇರಿದಂತೆ ಎಲ್ಲವನ್ನೂ ಕೊಡಿಸಿ ಸಂತೋಷವಾಗಿಟ್ಟಿದ್ದಾರೆ. ಸಂಸಾರ ಈ ದೇಶದಲ್ಲಿ ಮೂರ್ತಿ ಪೂಜೆ ನಡೆಯುತ್ತಿರುವುದರಿಂದಲೇ ಸುಖವಾಗಿದೆ. ಇವಿಷ್ಟೇ ಅಲ್ಲದೆ ಮೂರ್ತಿ ಪೂಜೆ ನಡೆಯುವ ದೇವಾಲಯಗಳ ಮೂಲಕವೇ ಸರ್ಕಾರಗಳಿಗೆ ಪ್ರತೀ ವರ್ಷ ಹತ್ತಾರು ಸಾವಿರ ಕೋಟಿ ಆದಾಯ ದೊರೆಯುತ್ತದೆ. ಆ ಆದಾಯದಿಂದಲೇ ಎಲ್ಲಾ ಜಾತಿ ಧರ್ಮದವರಿಗೂ ಸರ್ಕಾರೀ ಸೌಲಭ್ಯಗಳು ದೊರೆಯುತ್ತಿವೆ.  ಮೂರ್ತಿ ಪೂಜೆ ದೇವಾಲಯಗಳಿಂದಲೇ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ಪೌಷ್ಟಿಕ ಬಿಸಿಯೂಟ ದೊರೆಯುತ್ತಿದೆ.

ಇಷ್ಟು ಓದಿದ ಮೇಲೂ ಪುರೋಹಿತಶಾಹಿಗಳು ಇತರರನ್ನು ಶೋಷಿಸಲೆಂದೇ ಮೂರ್ತಿ ಪೂಜೆಯಯ ಪದ್ಧತಿಯನ್ನು ಹುಟ್ಟುಹಾಕಿದರು ಎನ್ನುವುದೇ ನಿಜವಾದರೆ ಇಂಥದ್ದೊಂದು ಪದ್ಧತಿಯನ್ನು ಹುಟ್ಟುಹಾಕಿ ಆ ಮೂಲಕ ಎಲ್ಲಾ ಜಾತಿ ಧರ್ಮದವರಿಗೂ ಬದುಕು ಕಟ್ಟಿಕೊಳ್ಳಲು ಕಾರಣವಾದ ಅವರಿಗೆ ಸಾವಿರ ಸಾವಿರ ನಮಸ್ಕಾರಗಳು. ಬುದ್ದಿಜೀವಿಗಳ, ಪ್ರಗತಿಪರರ, ವಿಚಾರವಾದಿಗಳ, ಕಮ್ಯುನಿಸ್ಟರ, ಸೆಕ್ಯುಲರ್ ರಾಜಕಾರಣಿಗಳ ಮಾತಿಗೆ ಗೌರವ ಕೊಟ್ಟು ನಾವು ಈಗಿಂದೀಗಲೇ ಮೂರ್ತಿ ಪೂಜೆ ನಿಲ್ಲಿಸಲು ಸಿದ್ಧ. ಆದರೆ ನಿಮಗೆ ಅಷ್ಟು ಉದ್ಯೋಗಗಳನ್ನು ಸೃಷ್ಟಿಸುವ ತಾಕತ್ತಿದೆಯೇ? ದೇವರ ಪೂಜೆಯಿಂದ ಸಿಗಬಹುದಾದ ನೆಮ್ಮದಿ, ನಿರಾಳತೆಯನ್ನು ಬೇರೆ ಯಾವುದರ ಮುಖಾಂತರವಾದರೂ ಕೊಡಿಸುವ ತಾಕತ್ತಿದೆಯೇ?

ವಿ.ಸೂ:ಮೇಲೆ ನೀಡಿದ ಅಂಕಿ ಅಂಶಗಳು ವಿಶ್ವಾಸಾರ್ಹವೇ ಆದರೂ 100% ಸರಿಯಾಗಿದೆಯೇ ಎನ್ನುವ ಮಾಹಿತಿಯನ್ನು ಅಧಿಕೃತ ಸರ್ಕಾರೀ ಮೂಲಗಳಿಂದಲೇ ಪಡೆದುಕೊಳ್ಳಬೇಕಾಗಿ ವಿನಂತಿ. ಹಾಗೆಯೇ ಇಲ್ಲಿ ನೀಡಲಾದ ಅಂಕಿ ಅಂಶಗಳ ಬಗ್ಗೆ ತಕರಾರಿರುವವರು ಇಂದಿನ ದಿನಾಂಕದ ಅಧಿಕೃತ ಸರ್ಕಾರೀ ಅಂಕಿ ಅಂಶಗಳನ್ನು ತಂದು ತೋರಿಸಿ ನಂತರ ವಾದಿಸಬೇಕಾಗಿ ವಿನಂತಿ.

ಕೃಪೆ- ವಾಟ್ಸಪ್

Edited By

Ramesh

Reported By

Ramesh

Comments