ಬಾಜಪಾ ದಿಂದ ವಿಜಯ ಸಂಕಲ್ಪ ಯಾತ್ರೆ

02 Mar 2019 6:08 PM |
78 Report

ಇಂದು ಅಖಿಲ ಭಾರತ ಬೈಕ್ ರ್ಯಾ ಲಿ ಕಾರ್ಯಕ್ರಮವನ್ನು ಬಾರತೀಯ ಜನತಾ ಪಕ್ಷ ದೇಶದಾದ್ಯಂತ ಹಮ್ಮಿಕೊಳ್ಳಲಾಗಿತ್ತು, ಇದರ ಅಂಗವಾಗಿ ದೊಡ್ಡಬಳ್ಳಾಪುರದ ಬಾಜಪ ಯುವ ಮೋರ್ಚ ವತಿಯಿಂದ ಈ ದಿನ ಬೆಳಿಗ್ಗೆ 10.30 ಕ್ಕೆ ದೊಡ್ಡಬಳ್ಳಾಪುರ ನಗರದ ಪಿ ಎಲ್ ಡಿ ಬ್ಯಾಂಕ್ ಮುಂಬಾಗದಿಂದ ಬೈಕ್ ರ್ಯಾ ಲಿಯನ್ನು ಏರ್ಪಡಿಸಲಾಗಿತ್ತು, ರ್ಯಾ ಲಿಯಲ್ಲಿ ನಗರ ಭಾಜಪಕ್ಷದ ಎಲ್ಲಾ ಪದಾಧಿಕಾರಿಗಳು, ಯುವ ಮೋರ್ಚದ ಎಲ್ಲಾ ಕಾರ್ಯಕರ್ತರು, ಮಹಿಳಾ ಮೋರ್ಚ ಸದಸ್ಯೆಯರೂ ಆಗಮಿಸಿದ್ದರು. ನಗರ ಪ್ರಧಾನ ಕಾರ್ಯದರ್ಶಿ ಬಿ.ಜಿ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ರ್ಯಾ ಲಿಯು ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಿಂದ ಹೊರಟು, ತಾಲ್ಲೂಕು ಕಛೇರಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಕೆ.ಸಿ.ಪಿ. ವೃತ್ತ, ಅರಳುಮಲ್ಲಿಗೆ ಸರ್ಕಲ್, ಮುಖ್ಯರಸ್ತೆ ಮಾರ್ಗವಾಗಿ, ರುಮಾಲೆ ವೃತ್ತ, ವಿವೇಕಾನಂದ ವೃತ್ತ, ಹಳೇ ಬಸ್ ನಿಲ್ದಾಣದ ಮೂಲಕ ನೆಲದ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಕೊನೆಗೊಂಡಿತು.

ಕಾರ್ಯಕ್ರಮ ಕುರಿತು ನಗರ ಅಧ್ಯಕ್ಷ ಕೆ.ಹೆಚ್.ರಂಗರಾಜು, ಪ್ರಧಾನ ಮಂತ್ರಿ ಮೋದಿಯವರನ್ನು ಮತ್ತೊಂಮ್ಮೆ ಅಧಿಕಾರಕ್ಕೇರಿಸಲು ಇಂದು ವಿಜಯ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಆಯೋಜಿಸಲಾಗಿದೆ, ವಿಜಯಲಕ್ಷ್ಯ ೨೦೧೯ ರ ಯೋಜನೆಯಂತೆ ಮುಂದಿನ ಚುನಾವಣೆಗೆ ಮತದಾರರನ್ನು ಜಾಗೃತ ಗೊಳಿಸಲು ಈ ಬೈಕ್ ರ‍್ಯಾಲಿಯನ್ನು ದೊಡ್ಡಬಳ್ಳಾಪುರದಲ್ಲಿ ಏರ್ಪಡಿಸಲಾಗಿದೆ, ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಗೆಲ್ಲಿಸಿ ಮೋದಿಯವರಿಗೆ ಉಡುಗೊರೆ ನೀಡಲು ಉದ್ದೇಶಿಸಲಾಗಿದೆ, ಎಲ್ಲಾ ಬಾಜಪ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಗಳಲ್ಲಿ ಅತಿಹೆಚ್ಚು ಮತಗಳು ಬಾಜಪಾಗೆ ಹಾಕಿಸಲು ಕಾರ್ಯೋನ್ಮುಖವಾಗಿ ಮತದಾರರನ್ನು ಸೆಳೆಯಿರಿ ಎಂದರು,  ಜೋನಾ ಮಲ್ಲಿಕಾರ್ಜುನ್ ಮತ್ತು ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚೆ ಅಧ್ಯಕ್ಷೆ ಎಂ.ಕೆ.ವತ್ಸಲ ಮಾತನಾಡಿದರು.

Edited By

Ramesh

Reported By

Ramesh

Comments