ದೇಶದ ಛಪ್ಪನ್ನಾರು ಸಣ್ಣ ದೊಡ್ಡ ಪಕ್ಷಗಳೆಲ್ಲವೂ ಮೋದಿಯ ಅವಸಾನವನ್ನು ಚಾತಕಪಕ್ಷಿಗಳಂತೆ ಎದುರು ನೋಡುತ್ತಿವೆ

15 Feb 2019 4:33 PM |
178 Report

ಇಷ್ಟು ದಿನ ಮೋದಿಯನ್ನು ನಖಶಿಖಾಂತ ದ್ವೇಷಿಸುತ್ತಿದ್ದ ಎಲ್ಲ ದೇಶದ್ರೋಹಿ ಹಡಬೆಗಳೂ ಒಂದಾಗಿ ಒಂದೇ ಸ್ವರದಲ್ಲಿ "ಈ ಕೃತ್ಯ ಮೋದಿಯ ವೈಫಲ್ಯ" ಎಂದು ಬೊಬ್ಬಿಡುತ್ತಿದ್ದರೆ, ಈ ಕೃತ್ಯದ ಹಿಂದಿನ "ಕೈ" ಯಾವುದು ಎಂಬುದು ಸ್ಪಷ್ಟ. ಭ್ರಷ್ಟಾಚಾರ ಇಲ್ಲ. ವಿವಿಧ ಇಲಾಖೆಗಳ ವೈಫಲ್ಯದ ಉದಾಹರಣೆಗಳು ಸಿಕ್ಕಿಲ್ಲ. ಮೋದಿಯನ್ನು ದೂರಲು ಇದ್ದ ಒಂದೇ ಒಂದು ಸಂಗತಿ 'ರಾಫೇಲ್' ಕೂಡ ಮೊನ್ನೆಯಷ್ಟೇ ಸಿಎಜಿ ವರದಿಯಿಂದ ಹೊಗೆ ಹಾಕಿಸಿಕೊಂಡಿದೆ. ಸದ್ಯಕ್ಕೆ ಇಟಾಲಿಯನ್ ಯುವರಾಜನ ಬೆಟಾಲಿಯನ್ ನಲ್ಲಿರುವ ಎಲ್ಲ ಕ್ಷಿಪಣಿಗಳೂ ಠುಸ್ ಠುಸ್ ಎಂದು ನೆಲಕ್ಕೆ ಬೀಳುತ್ತಿವೆ. ಆತನ ಬತ್ತಳಿಕೆ ಖಾಲಿ ಖಾಲಿ. ಕೊಟ್ಟಕೊನೆಗೆ ಪಾಪಿಸ್ಥಾನಕ್ಕೆ ಕುಮ್ಮಕ್ಕು ಕೊಟ್ಟು ಯೋಧರ ಮೇಲೆ ದಾಳಿಯನ್ನಾದರೂ ಮಾಡಿಸಿ ಆ ಮೂಲಕ ಮೋದಿ ವಿಫಲ ಎಂದು ಕೂಗಿ ಹೇಳಬೇಕಾಗಿದೆ.

ಆ ಮೂಲಕ ಮೋದಿಯ ಮೇಲೆ ಜನರ ಆಕ್ರೋಶ ಮುಗಿಲು ಮುಟ್ಟುವಂತೆ ನೋಡಿಕೊಳ್ಳಬೇಕಾಗಿದೆ. ಮುಂದಿನ ಎರಡು ತಿಂಗಳು ಆ ಹವಾ ಕಾಯ್ದುಕೊಂಡರೂ ಸಾಕು, ಮೋದಿಗೆ ಬೀಳುವ ಓಟಿನ ಪ್ರಮಾಣವನ್ನು ಅಷ್ಟರಮಟ್ಟಿಗೆ ತಗ್ಗಿಸಬಹುದು. ಅಷ್ಟರಮಟ್ಟಿಗೆ ತನ್ನ ಸೀಟು ಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು. 30-40 ಪಕ್ಷಗಳ ಜೊತೆ ಸೇರಿ, ಅವರ ಒಂದು ಎರಡು ಮೂರು ಸೀಟುಗಳನ್ನೆಲ್ಲ ಗುಡಿಸಿ ಒಟ್ಟು ಹಾಕಿ ಹೇಗೋ ಬಹುಮತ ಸಂಪಾದಿಸಿ ಅಧಿಕಾರ ಹಿಡಿಯಬಹುದು. ಮೋದಿಯನ್ನು ಅಧಿಕಾರದಿಂದ ದೂರ ಇಡುವುದೇ ಏಕೈಕ ಉದ್ದೇಶವಾಗಿರುವ ಎಲ್ಲ ಕಳ್ಳ-ಖೂಳರೂ ಈ ಘನಂದಾರೀ ಕೆಲಸದಲ್ಲಿ ತನ್ನ ಕೈ ಹಿಡಿದೇ ಹಿಡಿಯುತ್ತಾರೆ ಎಂಬುದೇ ಯುವರಾಜನಿಗಿರುವ ಅಚಲ ನಂಬಿಕೆ.  ಇಲ್ಲಿ ಇನ್ನೊಂದು ಸೂಕ್ಷ್ಮವಿದೆ.  ಯಾಕೆ ಈಗಲೇ, ಚುನಾವಣೆಗೆ ಎರಡು ತಿಂಗಳಿರುವಾಗಲೇ ಈ ದೊಡ್ಡ ಪ್ರಮಾಣದ ಹತ್ಯಾಕಾಂಡ ನಡೆದಿದೆ? ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು..

(1) ಈ ಮೂಲಕ ಮೋದಿಯನ್ನು ಅಧೀರಗೊಳಿಸುವುದು. ಚುನಾವಣಾ ಪ್ರಚಾರದ ಮೇಲೆ ಕರಿಛಾಯೆ ಮುಸುಕುವಂತೆ ಮಾಡುವುದು.  ಚುನಾವಣೆಯತ್ತ ಮೋದಿ ಕೊಡಬೇಕಿದ್ದ ಗಮನವನ್ನು ರಕ್ಷಣಾ ವ್ಯವಸ್ಥೆಯ ಕಡೆ ಕೊಡುವಂತೆ ಮಾಡಿ ಅಷ್ಟರಮಟ್ಟಿಗೆ ಮೋದಿ ಎಂಗೇಜ್ಡ್ ಆಗಿರುವಂತೆ ನೋಡಿಕೊಳ್ಳುವುದು.

(2) ಮೋದಿ, ಮತ್ತೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಅಥವಾ ಯುದ್ಧ ಘೋಷಿಸಲು ತಡ ಮಾಡಿದರೆ 'ಏನ್ರೀ ನಿಮ್ಮ ಚೌಕಿದಾರ ಏನ್ ಮಾಡ್ತಿದಾನೆ? 56 ಇಂಚಿನ ಎದೆ ಎಲ್ಲಿ ಹೋಯ್ತು?' ಎಂದೆಲ್ಲ ಕಿಚಾಯಿಸುವುದು. ಆ ಮೂಲಕ, ಮೋದಿ ಓರ್ವ ಅಸಮರ್ಥ ನಾಯಕ ಎಂದು ಜನಸಾಮಾನ್ಯರಲ್ಲಿ ಬಿಂಬಿಸಲು ಯತ್ನಿಸುವುದು.

(3) ಮೋದಿ ಒಂದು ವೇಳೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಹೋದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ಮೇಲೆ ಒತ್ತಡ ತರುವುದು. ಮೋದಿ ಓರ್ವ blood thirsty ನಾಯಕ ಎಂದು ಬಿಂಬಿಸುವುದು.  ಭಯೋತ್ಪಾದನೆಯನ್ನು ತಡೆಯಲು ಅಸಮರ್ಥ ನಾಯಕ ಎಂದು ಜಗತ್ತಿಗೆ ಕೂಗಿ ಹೇಳುವುದು.  ಮೋದಿಯ ಪ್ರಭಾವ ತಗ್ಗಿಸಲು ಪ್ರಯತ್ನಿಸುವುದು.

(4) ಮೋದಿಯೇನಾದರೂ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಯುದ್ಧಕ್ಕೆ ಸನ್ನದ್ಧರಾದರೆ ಆಕಾಶವೇ ಕಳಚಿ ಬಿತ್ತು ಎಂದು ಹಾರಾಡುವುದು.  ದೇಶವನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿದ ನಾಯಕ ಎಂದು ದೇಶಾದ್ಯಂತ ಭಯದ ವಾತಾವರಣ ನಿರ್ಮಿಸುವುದು.  ಚೀನಾ ಮೂಲಕ ಮೋದಿಯನ್ನು ಕಟ್ಟಿಹಾಕುವ ಕೆಲಸ ಮಾಡುವುದು. 

ಸ್ವಲ್ಪ ಗಮನಿಸಿ. ಯೋಧರ ಹತ್ಯೆಯಾಗಿ ಕೇವಲ ಮೂರ್ನಾಲ್ಕು ತಾಸುಗಳೂ ಆಗಿರಲಿಲ್ಲ.  ಅಷ್ಟರಲ್ಲೇ ದೇಶದ ಬುದ್ಧಿಜೀವಿಗಳೆಲ್ಲ ಒಂದೇ ಸಲಕ್ಕೆ ಅಖಾಡಾಕ್ಕೆ ಧುಮುಕಿ ಮೋದಿಗೆ ಬುದ್ಧಿವಾದ ಹೇಳಲು ನಿಂತುಬಿಟ್ಟಿದ್ದಾರೆ. ಯೋಧರ ಸಾವಿಗೆ ಮರುಗುವ ನಾಟಕವಾಡುತ್ತ, ಸಿಕ್ಕಿದ್ದೇ ಚಾನ್ಸ್ ಎಂದು ಮೋದಿಯನ್ನು ಹಳಿಯಲು ಈ ಸಂದರ್ಭ ಬಳಸಿಕೊಳ್ಳುತ್ತಿದ್ದಾರೆ. 'ಭಯೋತ್ಪಾದಕರ ಜೊತೆ ಮಾತುಕತೆ, ಚರ್ಚೆ ಮೂಲಕ ಶಾಂತಿ ಸಂಧಾನ ನಡೆಸಬೇಕು' ಎಂದು ಸಾಕ್ಷಿಪ್ರಜ್ಞೆಗಳು ಟ್ವಿಟ್ಟರ್ ನಲ್ಲಿ ಕುಟ್ಟುತ್ತಿವೆ. ಕಾಂಗ್ರೆಸ್ ಈಗಾಗಲೇ ತನ್ನ ಅಫಿಷಿಯಲ್ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. 'ಎಲ್ಲಿದೆ 56 ಇಂಚಿನ ಎದೆ? ಇದೇ ಏನು ನೀವು ದೇಶಕ್ಕೆ ಕೊಡುವ ಭದ್ರತೆ?' ಎಂದೆಲ್ಲ ಕಿಚಾಯಿಸಲು ನಿಂತಿದೆ ಈ 150 ವರ್ಷಗಳ ಇತಿಹಾಸವಿರುವ ಪಕ್ಷ. ಮೋದಿಯ ವಿರುದ್ಧ ನಿಂತಿರುವ ಎಲ್ಲಾ ಸಣ್ಣ-ದೊಡ್ಡ ರಾಜಕೀಯ ಪಕ್ಷಗಳೂ ಈ ಹತ್ಯಾಕಾಂಡವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿವೆ. ಮೋದಿ ಅಸಮರ್ಥ, ನಮ್ಮ ರಕ್ಷಣಾ ವ್ಯವಸ್ಥೆ ಸರಿಯಾಗಿಲ್ಲ, ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲ, ಇದು ಭದ್ರತಾ ವೈಫಲ್ಯ, ಕೇಂದ್ರ ಸರಕಾರದ ವೈಫಲ್ಯ, ಇಂಟೆಲಿಜೆನ್ಸ್ ಫೈಲ್ಯೂರ್ ಎಂದೆಲ್ಲ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿವೆ. ಇನ್ನು ಮುಂದಿನ ನಾಲ್ಕೈದು ದಿನಗಳಲ್ಲಂತೂ ಇದು ತಾರಕಕ್ಕೆ ಮುಟ್ಟಲಿದೆ. ಇಷ್ಟು ದಿನ ಮೋದಿಯನ್ನು ಬೆಂಬಲಿಸುತ್ತ ಬಂದಿರುವ ಶ್ರೀ ಸಾಮಾನ್ಯನ ಮನಸಲ್ಲೂ ಮೋದಿಯ ಕುರಿತು ಒಂದು ಸಣ್ಣ ಅಸಮಾಧಾನ, ಸಂಶಯ ಹುಟ್ಟುವಂತೆ ಮಾಡಿದ್ದೇ ಆದರೆ ಅದೇ ಈ ಪಕ್ಷಗಳ ಸಾಧನೆ!

ಹಾಗಾದರೆ, ಈ ಹತ್ಯಾಕಾಂಡದ ಹಿಂದೆ ಇರುವವರು ಯಾರು? ಯೋಚಿಸಿ! ಈ ಹತ್ಯಾಕಾಂಡದ ಲಾಭ ಪಡೆಯಲು ಯಾವೆಲ್ಲ ರಣಹದ್ದುಗಳು ಕಾತರಿಸುತ್ತಿವೆ? ಯೋಚಿಸಿ! ಈ ಹತ್ಯಾಕಾಂಡವನ್ನು ನೆಪ ಮಾಡಿಕೊಂಡು ಯಾರೆಲ್ಲ ಮೋದಿಯ ವಿರುದ್ಧ ಹರಿಹಾಯುತ್ತಿದ್ದಾರೆ? ಯೋಚಿಸಿ! ಈ ಹತ್ಯಾಕಾಂಡವನ್ನು ಯಾರೆಲ್ಲ ಗುಟ್ಟಾಗಿ ಸಂಭ್ರಮಿಸುತ್ತಿದ್ದಾರೆ? ಯೋಚಿಸಿ! ಈ ದೇಶವನ್ನು ಹರಿದು ಹಂಚಿ ತಿನ್ನಲು ಯಾವೆಲ್ಲ ನರಿ ನಾಯಿ ಹದ್ದು ಹಂದಿಗಳು ಬಾಯಿ ಬಾಯಿ ಬಿಟ್ಟು ಕಾಯುತ್ತಿವೆ? ಯೋಚಿಸಿ!

ಮೋದಿಯವರ ಪರಿಸ್ಥಿತಿ ನಮ್ಮನಿಮ್ಮಂತೆ ಸರಳವಾದುದಲ್ಲ.  ಏಕಕಾಲಕ್ಕೆ ಅವರು ಪಾಪಿಸ್ಥಾನದ ಜೊತೆ, ಅತ್ತ ಚೀನಾದ ಜೊತೆ, ಮತ್ತೆ ರಷ್ಯದ ಜೊತೆ, ಅದರಾಚೆ ಅಮೆರಿಕವೆಂಬ ತಲೆಕೆಟ್ಟ ದೇಶದ ಜೊತೆ ಏಗಬೇಕಿದೆ.  ಮಾತ್ರವಲ್ಲ, ದೇಶದೊಳಗೇ ಇದ್ದು ದೇಶದ ಬೊಡ್ಡೆಯನ್ನು ತೂತುಕೊರೆದು ಬೀಳಿಸುವ ಎಲ್ಲ ಒರಲೆಗಳೊಂದಿಗೂ ಹೆಣಗಬೇಕಿದೆ.  ಕೇವಲ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಮಾತ್ರವಲ್ಲ... ದೇಶದ ಛಪ್ಪನ್ನಾರು ಸಣ್ಣ ದೊಡ್ಡ ಪಕ್ಷಗಳೆಲ್ಲವೂ ಮೋದಿಯ ಅವಸಾನವನ್ನು ಚಾತಕಪಕ್ಷಿಗಳಂತೆ ಎದುರು ನೋಡುತ್ತಿವೆ ಎಂಬುದನ್ನು ಮರೆಯುವಂತಿಲ್ಲ.  ಜೊತೆಗೆ, ದೇಶದ ಮಾನ-ಸಮ್ಮಾನಗಳನ್ನು ಹರಾಜು ಹಾಕಲೆಂದೇ ಬುದ್ಧಿಜೀವಿ ಚಿಂತಕರ ಪಡೆ ಸದಾ ಸನ್ನದ್ಧ.  ಇವೆಲ್ಲ ದುಷ್ಮನ್ನರ ಜೊತೆ ಏಕಕಾಲಕ್ಕೆ ಅಭಿಮನ್ಯುವಾಗಿ ಸೆಣಸಬೇಕಾದ ಅನಿವಾರ್ಯತೆ ಸದ್ಯದ ಪ್ರಧಾನಿಗಳದ್ದು.

ಈ ವಿಪತ್ಕಾಲದಲ್ಲಿ ನೀವು ನಿಲ್ಲಬೇಕಾದ್ದು ಮೋದಿಯ ಜೊತೆಗಾ, ಅವರ ವಿರೋಧಿಗಳ ಜೊತೆಗಾ, ಯೋಚಿಸಿ!

ಬರಹ ಸೌಜನ್ಯ- ರೋಹಿತ್ ಚಕ್ರತೀರ್ಥ*

 

Edited By

Ramesh

Reported By

Ramesh

Comments