ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹೊಲಿಗೆ ಮತ್ತು ಕುಚ್ಚು ಕಟ್ಟುವ ಕಲಿಕೆ ಕಾರ್ಯಕ್ರಮ

12 Feb 2019 3:16 PM |
168 Report

ದಿನಾಂಕ ೧೧-೨-೨೦೧೯ ರ ಸೋಮವಾರ ರೋಜಿಪುರದ ಸಮುದಾಯ ಭವನದಲ್ಲಿ ಮಹಿಳೆಯಿರಿಗೆ ಸ್ವಯಂ ಉದ್ಯೋಗ ಮಾಡಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ನಗರದ ಸ್ಪೂರ್ತಿ ಮಹೀಳಾ ಮಂಡಳಿ ಸಹಯೋಗದೊಂದಿಗೆ ಹೊಲಿಗೆ ಮತ್ತು ಕುಚ್ಚು ಕಟ್ಟುವ ಕಲಿಕೆ ಕಾರ್ಯಕ್ರಮ ಏರ್ಪಡಿಸಿದ್ದಕ್ಕಾಗಿ ನಗರಸಭ ಸದಸ್ಯ ಆರ್ ಕೆಂಪರಾಜು ರವರನ್ನ ತರಬೇತಿ ಪಡೆದ ಮಹಿಳೆಯರು ಅಭಿನಂದಿಸಿದರು, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸದಸ್ಯ ಕೆಂಪರಾಜು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಇದು ಒಳ್ಳೆ ಅವಕಾಶ ಇಂಥ ಅವಕಾಶವನ್ನ ಮಹಿಳೆಯರು ಇನ್ನೂ ಹೆಚ್ಚಿಗೆ ಬಳಸಿಕೊಂಡು ಮನೆ ಕೆಲಸದ ಜೊತೆಗೆ ಹಣ ಸಂಪಾದನೆ ಕೂಡ ಆಗುತ್ತದೆ ಎಂದರು.

ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿ ಶ್ರೀದರ್ ಮಾತನಾಡಿ ಹಲವಾರು ಕಡೆ ತರಬೆತಿ ನೀಡಿದ್ದೇನೆ, ಈ ರೀತಿಯ ಸಹಕಾರ ಎಲ್ಲೂ ಸಿಕ್ಕಿಲ್ಲ ಇಲ್ಲಿ ತರಬೆತಿ ಪಡೆದ ಮಹಿಳೆಯರು ಬಹಳ ಉತ್ಸುಕರಾಗಿ ಸಮಯಕ್ಕೆ ಸರಿಯಾಗಿ  ಬಂದು ನಾವು ಕಲಿಸುವ ತರಬೆತಿ ಪಡೆದರು, ಮತ್ತೆ ಮುಂದಿನ ಮಾರ್ಚ್ ತಿಂಗಳಿನಿಂದ ಎಂಬ್ರಾಯ್ಡರಿ ತರಬೇತಿ  ಪ್ರಾರಂಭಿಸಲಾಗುಗವುದು ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶೈಲಜಾ ತರಬೇತಿ ಶಿಕ್ಷಕಿ ಅಂಬ್ರಿನ್ 2 ನೇ ವಾರ್ಡ ಯುವ ಮುಖಂಡ ಮಹೆಶ್, ರಾಜೇಶ್, ನಳಿನಾ, ಲೀಲಾಂಭಿಕೆ, ಶಶಿಕಲಾ, ಗಂಗಮ್ಮ, ಗೌತಮಿ ಹಾಗೂ ನೂರಾರು ಜನ ತರಬೆತಿ ಪಡೆದ ಮಹಿಳೆಯರು ಹಾಜರಿದ್ದರು.

Edited By

Ramesh

Reported By

Ramesh

Comments