ಸಂಘಟನೆಗಳ ನೇತೃತ್ವದಲ್ಲಿ ಸಂಕ್ರಾಂತಿ ಸಂಭ್ರಮ

16 Jan 2019 5:58 AM |
342 Report

ವಿಶ್ವ ಹಿಂದು ಪರಿಷತ್, ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ನೇತೃತ್ವದಲ್ಲಿ, ಕನ್ನಡ ರಕ್ಷಣಾ ವೇದಿಕೆ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಮೋದಿ ಬಾಯ್ಸ್, ಚಿರರುಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಘಟನೆಗಳ ಸಹಕಾರದೊಂದಿಗೆ ಸಂಕ್ರಾಂತಿ ಹಬ್ಬದಂದು ಗೋವಿನ ಬಗ್ಗೆ ಜಾಗೃತಿಯನ್ನು ಮೂಡಿಸಲು ಗೋಯಾತ್ರೆ ಏರ್ಪಡಿಸಲಾಗಿತ್ತು, ತೇರಿನಬೀದಿ ವೃತ್ತದಿಂದ ಹೊರಟು ಮುಖ್ಯರಸ್ತೆ ಮಾರ್ಗವಾಗಿ ಕಲ್ಲುಪೇಟೆ ಮುಖಾಂತರ ಕೊಂಗಾಡಿಯಪ್ಪ ಕಾಲೇಜು ರಸ್ತೆಯ ಬಯಲು ಬಸವಣ್ಣನ ದೇವಸ್ಥಾನದವರೆಗೆ " ಗೋಯಾತ್ರೆ " ಯನ್ನು ಹಮ್ಮಿಕೊಳ್ಳಲಾಗಿತ್ತು.

ನಮೋ ಸೇನೆ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಹಿಂದೂ ಜಾಗರಣ ವೇದಿಕೆ ವತಿಯಿಂದ ಸಂಕ್ರಾಂತಿ ಉತ್ಸವ ಹಾಗೂ ಗೋ ಪೂಜೆಯನ್ನು ಸಂಜೆ ಆರು ಘಂಟೆಗೆ ನೆಲದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿತ್ತು, ಘನಶ್ಯಾಮ್ ದಂಪತಿಗಳು ಗೋಪೂಜೆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಮಹಿಳೆಯರಿಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ನಾಗರತ್ನ ಮತ್ತು ಶಶಿಕಲಾ ಅರಿಶಿನ ಕುಂಕುಮ, ರವಿಕೆ ಕಣ, ಎಳ್ಳು-ಬೆಲ್ಲ, ಕಬ್ಬು ನೀಡಿದರು. ನಮೋಸೇನ ಮಾರ್ಗದರ್ಶಕ ಹಾಗೂ ಗೋಶಾಲಾ ಮುಖ್ಯಸ್ಥ ಜೀವನ್ ಕುಮಾರ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಂಜಪ್ಪ, ಸುರೇಶ್, ಗಂಗಾಧರ್, ಸುನಿಲ್ ಕುಮಾರ್, ಡಿ.ಎಸ್. ಕಾರು ಚಾಲಕರ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಘನಶ್ಯಾಮ್, ನಮೋಸೇನೆ ಗೌರವಾದ್ಯಕ್ಷ ಅಜಯ್, ಮೋಹನ್,ಮುನೇಗೌಡರು.ಶಿವಕುಮಾರ್, ಗಂಗದಾರ್, ಯಾದವ್, ರಾಜೀವ್, ವೀಣಾ, ಸೋಮಶೇಖರ್, ಹಾಗೂ ಸಂಸ್ಥಾಪಕ ಅಧ್ಯಕ್ಷ ಕೆಂಪೇಗೌಡ ಹಿಂದೂ ಸಮರಸೇನೆ ಅಧ್ಯಕ್ಷ ಗಣೇಶ್ ಮತ್ತು ಕಾರ್ಯಕರ್ತರು, ಬೆಂಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ ಹಾಜರಿದ್ದರು.

ಘನಶ್ಯಾಮ್ ಮತ್ತು ಗಣೇಶ್ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬದಂದು ಹಿಂದೂ ಧರ್ಮದ ಆಚಾರ, ಶಾಸ್ತ್ರ, ಗೋರಕ್ಷಣೆ,ಲವ್ ಜಿಹಾದ್ ವಿರುದ್ಧ ಹೋರಾಡಲು ಹೊಸ ಹಿಂದೂ ಸಂಘಟನೆ ಹಿಂದೂ ಸಮರ ಸೇನೆ ಆರಂಭವಾಯಿತು. ಸಂಘಟನೆ ಸೇರಲು ಆಸಕ್ತಿಯುಳ್ಳವರು ಸಂಪರ್ಕಿಸಿ-7975899937

Edited By

Ramesh

Reported By

Ramesh

Comments