ವೈಯುಕ್ತಿಕ ದ್ವೇಷಕ್ಕೆ ಯುವಕ ಗಂಗಾಧರ್ [ದಾಸ] ಹತ್ಯೆ....

09 Jan 2019 8:14 AM |
132 Report

ಇಲ್ಲಿನ ದೇವರಾಜನಗರದ ನಿವಾಸಿ ರೌಡಿಶೀಟರ್ ಗಂಗಾಧರ್[3೦] ಸೋಮವಾರ ರಾತ್ರಿ ಹನ್ನೊಂದು ಘಂಟೆಯ ಸುಮಾರಿಗೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಂಗಾಡಿಯಪ್ಪ ಕಾಲೇಜು ರಸ್ತೆಯ ಸಮೀಪದಲ್ಲಿ ಕೊಲೆಯಾಗಿದ್ದಾನೆ, ನಗರದ ಹಳೇ ಬಸ್ ನಿಲ್ದಾಣದಲ್ಲಿ ಸಂಜೆಯ ಹೊತ್ತು ಕಬಾಬ್ ಅಂಗಡಿ ನೆಡೆಸುತ್ತಿದ್ದು, ಮನೆಯ ಹತ್ತಿರ ಬಿಸಿಲೇರಿ ನೀರು ಸರಬರಾಜಿನ ಘಟಕವನ್ನು ನೆಡೆಸುತ್ತಿದ್ದನು ಎಂದು ತಿಳಿದು ಬಂದಿದೆ, ಆರೋಪಿಗಳಾದ ಕಬಾಬ್ ಆನಂದ್, ಲೋಕಿ, ಸ್ವಾಮಿ ವಿರುದ್ಧ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿ ಕಬಾಬ್ ಆನಂದನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರಿಗಾಗಿ ಹುಡುಕಾಟ ನೆಡೆದಿದೆ ಎಂದು ಸಬ್ಇನ್ ಸ್ಪೆಕ್ಟರ್ ಬಿ.ಕೆ.ಪಾಟಿಲ್ ತಿಳಿಸಿದ್ದಾರೆ. ಮೃತ ಗಂಗಾಧರ್ ಮತ್ತು ಆರೋಪಿ ಕಬಾಬ್ ಆನಂದ ರೌಡಿ ಶೀಟರ್ ಗಳಾಗಿದ್ದು ಇವರ ಮೇಲೆ ರಾಜ್ಯದ ವಿವಿಧ ಪೋಲೀಸ್ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ ಎನ್ನಲಾಗಿದೆ.

Edited By

Ramesh

Reported By

Ramesh

Comments