ಬ್ರೈಲ್ ಲಿಪಿಯ ಶ್ರೀ ರಾಮ ನಾಮಾವಳಿ ಸಮರ್ಪಣೆ....ನಾಮದೇವರ ರಾವ್ ರವರಿಂದ

20 Dec 2018 4:36 PM |
468 Report

ಇಂದು ಹನುಮ ಜಯಂತಿ ನಗರದಲ್ಲಿರುವ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಷೇಶ ಅಲಂಕಾರ ಮತ್ತು ಪೂಜೆ ಏರ್ಪಡಿಸಲಾಗಿತ್ತು, ಊರಿನ ಇತಿಹಾಸ ಪ್ರಸಿದ್ಧ ನೆಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ನಾಲ್ಕು ಘಂಟೆಗೆ ಸ್ವಾಮಿಗೆ ಅಭಿಷೇಕ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಹತ್ತು ಘಂಟೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು, ಬಂದಂತಹ ಭಕಾದಿಗಳು ನೂರೆಂಟು ಶ್ರೀ ರಾಮನಾಮಾವಳಿಯನ್ನು ಸ್ಥಳದಲ್ಲೇ ಬರೆಯುವ ವ್ಯವಸ್ಥೆಯನ್ನು ಕಾರ್ಯಕಾರಿ ಸಮಿತಿಯವರು ಮಾಡಿದ್ದರು, ಊರಿನ ಹಿರಿಯರಾದ ನಾಮದೇವರಾವ್ ಬ್ರೈಲ್ ಲಿಪಿಯಲ್ಲಿ ಹದಿನೆಂಟು ಪುಟಗಳಲ್ಲಿ [ಸುಮಾರು ಎರಡು ಸಾವಿರ] ಬರೆದಿದ್ದ ಶ್ರೀ ರಾಮ ನಾಮಾವಳಿಯನ್ನು ಆಡಳಿತ ಮಂಡಲಿಯವರಿಗೆ ಅರ್ಪಿಸಿದರು.

ಈ ಕುರಿತು ನೆಲದ ಆಂಜನೇಯಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ಸೀತಾರಾಂ ಮಾತನಾಡಿ ಈಗಾಗಲೇ ಭಕ್ತಾದಿಗಳಿಂದ ಸುಮಾರು ನಲವತ್ತು ಸಾವಿರ ಪುಟಗಳ ರಾಮ ನಾಮವನ್ನು ಭಕ್ತರು ಬರೆದು ಕೊಟ್ಟಿದ್ದಾರೆ, ಸಂಕ್ರಾಂತಿಯ ಹೊತ್ತಿಗೆ ಎಲ್ಲಾ ನಾಮಾವಳಿಗಳನ್ನು ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಅರ್ಪಿಸಲಾಗುವುದು, ಅವರು ಶ್ರೀರಾಮನವಮಿ ಯಂದು ನೆಡೆಯುವ ಶ್ರೀ ರಾಮ ಯಜ್ಞಕ್ಕೆ ರಾಮನಾಮಾವಳಿ ಅರ್ಪಿಸುವರು ಎಂದರು. ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ, ಉಪಾಧ್ಯಕ್ಷ ಗೋವಿಂದಶೆಟ್ಟಿ, ಖಜಾಂಚಿ ಬುರುಕುಂಟೆ ವಿಶ್ವನಾಥ್, ಸಹಕಾರ್ಯದರ್ಶಿ ಶ್ರೀಕಾಂತ್, ಸಂಚಾಲಕರು ಹಾಗೂ ನಿರ್ದೇಶಕರಾದ ಶ್ರೀಧರ್, ಪ್ರಸನ್ನಕುಮಾರ್, ನಾರಾಯಣ ನಾಯ್ಡು, ಪವನ್ ಗುಪ್ತ ಹಾಜರಿದ್ದರು.

ರೋಜಿಪುರದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಒಂದು ವಾರದಿಂದ ಅಖಂಡ ಭಜನಾ ಸಪ್ತಾಹ ನೆಡೆಸಿ ಇಂದು ಕೊನೆಗೊಳಿಸಿ ಸ್ವಾಮಿಗೆ ಅಭಿಷೇಕ ಮತ್ತು ಪೂಜೆ ನೆಡೆಸಲಾಯಿತು. ತಾಲ್ಲೂಕಿನ ರಾಜಘಟ್ಟದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ರಥೋತ್ಸವ ನೆಡೆಯಿತು, ಅಮಾವಾಸ್ಯೆ ಭಕ್ತ ಮಂಡಲಿಯವರಿಂದ ವಿಷೇಶ ಪೂಜೆ, ಅಲಂಕಾರ ಮತ್ತು ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು, ಸ್ವಾಮಿಯವರ ಉತ್ಸವವನ್ನು ಕೊನಘಟ್ಟ ಶಿವಪ್ಪ ಮತ್ತು ಕುಟುಂಬದವರು ನೆಡೆಸಿಕೊಟ್ಟರು.  ನಗರದ ಹೊರವಲಯದ ಹಾಲಳ್ಳಿ ಕೆರೆ ಏರಿಯಮೇಲೆ ಜೀರ್ಣೋದ್ಧಾರ ಗೊಳಿಸಿರುವ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಅಭಿಷೇಕ, ಹೋಮ ಮತ್ತು ಪೂಜೆಯನ್ನು ಕಮಿಟಿ ವತಿಯಿಂದ ಏರ್ಪಡಿಸಲಾಗಿತ್ತು.  

Edited By

Ramesh

Reported By

Ramesh

Comments