ಬಿಗ್​ ಬ್ರೇಕಿಂಗ್​ : ಸಿಎಂ ಹೆಚ್​ಡಿಕೆಯ ಮಾಸ್ಟರ್​ ಪ್ಲ್ಯಾನ್​ ಗೆ ಕಮರಿದ ಕಮಲ...! ಕೊನೆಗೂ ವರ್ಕೌಟ್​ ಆಯ್ತು....

04 Dec 2018 11:08 AM |
11331 Report

ಸಮ್ಮಿಶ್ರ ಸರ್ಕಾರ ಆದಾಗಿನಿಂದಲೂ ಕುಮಾರಸ್ವಾಮಿಗೆ ಒಂದಲ್ಲಾ ಒಂದು ರೀತಿ ಸಂಕಷ್ಟ ಎದುರಾಗುತ್ತಿದೆ. ತಮ್ಮವರನ್ನು ಉಳಿಸಿಕೊಳ್ಳಲು ರಾಜಾನಾಕಯನಾಗಿ ಯಾಗ ಮಾಡುತ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಭಾರೀ ಶ್ರಮಿಸುತ್ತಿದ್ದಾರೆ ಎಂಬ ಮಾತುಗಳು ಸಮ್ಮಿಶ್ರ ಸರ್ಕಾರದ ವಲಯದಲ್ಲಿ ಕೇಳಿ ಬರುತ್ತಿವೆ. ಈ ನಡುವೆ ಬಿಜೆಪಿ ಆಪರೇಷನ್​ ಕಮಲಕ್ಕೆ ಸಿದ್ಧವಾಗಿದೆ. ಇದನ್ನು ಹೇಗಾದರೂ ಮಾಡಿ ತಡೆಯಬೇಕು, ನಮ್ಮವರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳ ಬೇಕು ಎಂದು ಒಂದು ಪ್ರತೀ ತಂತ್ರ ರೂಪಿಸಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಮಹಾಯಾಗದಲ್ಲಿ ಕುಮಾರಸ್ವಾಮಿ ಅವರು ತಾವು ಗೆದ್ದೇ ಗೆಲ್ಲುತ್ತವೆ. ಬಿಜೆಪಿಯಿಂದ ಏನನ್ನೂ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ.

ಮತ್ತೆ ಸಮ್ಮಿಶ್ರ ಸರ್ಕಾರ ಬೀಳಿಸಲು ಆಪರೇಷನ್ ಕಮಲಕ್ಕೆ ತೆರೆಮರೆಯ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಸಿಎಂ ಕುಮಾರಸ್ವಾಮಿ ಭರ್ಜರಿ ತಂತ್ರವನ್ನೇ ಹೆಣೆದಿದ್ದಾರೆ.ಕಾಂಗ್ರೆಸ್ ನ ಅತೃಪ್ತ ಶಾಸಕರನ್ನೇ ಗುರಿಯಾಗಿಸಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಈಗ ಸಿಎಂ ಕುಮಾರಸ್ವಾಮಿ ಅಂತಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲು ಮುಂದಾಗಿದ್ದಾರೆ.ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ, ಶಾಸಕರು ಹೇಳಿದ ಅಧಿಕಾರಿಗಳ ವರ್ಗಾವಣೆಗೆ ಮನ್ನಣೆ ನೀಡುವ ಭಾಗ್ಯವನ್ನು ನೀಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಜೆಡಿಎಸ್ ಶಾಸಕರ ಪ್ರಾಬಲ್ಯವಿರುವಲ್ಲಿ ಕಾಂಗ್ರೆಸ್ ಶಾಸಕರು, ನಾಯಕರಿಗೆ ಅವಮಾನವಾಗದಂತೆ ನಡೆದುಕೊಳ್ಳುವ ಇತ್ಯಾದಿ ಭರ್ಜರಿ ತಂತ್ರವನ್ನೇ ಕುಮಾರಸ್ವಾಮಿ ಎಣೆದಿದ್ದಾರೆ. ಈ ಮೂಲಕ ಅತೃಪ್ತರು ಬಿಜೆಪಿ ಕಡೆ ವಾಲದಂತೆ ನೋಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಾಗದು. ಸಮ್ಮಿಶ್ರ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಆದರೂ ಬಿಜೆಪಿಯವರು ಸರ್ಕಾರ ಕೆಡವಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಕುಮಾರಸ್ವಾಮಿ ಅವರ ಈ ತಂತ್ರ ಶೇ. 100 ವರ್ರ್ಕೌಟ್​ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ, ಸಮ್ಮಿಶ್ರ ಸರ್ಕಾರದ ಮುಂ ಏನೂ ಮಾಡಲಾಗುವುದಿಲ್ಲ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಬೊಬ್ಬಿಡುತ್ತಿವೆ

Edited By

hdk fans

Reported By

hdk fans

Comments