ನಮ್ಮ ಪಕ್ಷಕ್ಕೆ ಹೈ ಕಮಾಂಡ್ ಇಲ್ಲಾ... ಜನರೇ ನಮ್ಮ ಪಕ್ಷದ ಹೈ ಕಮಾಂಡ್ : ಹೆಚ್ .ಡಿ ಕುಮಾರಸ್ವಾಮಿ ಕೋಳಾಲ ಗ್ರಾಮಲ್ಲಿ ಪಿ.ಆರ್ ಸುಧಾಕರ್ ಲಾಲ್ ಪರವಾಗಿ ಪ್ರಚಾರ ... ಜೆಡಿಎಸ್ ಪಕ್ಷ ಗೆಲ್ಲಿಸಲು ಕರೆ

07 May 2018 9:04 PM |
1289 Report

ಕೊರಟಗೆರೆ ಮೇ. ನಮ್ಮ ಪಕ್ಷಕ್ಕೆ ಯಾವುದೇ ಹೈ ಕಮಾಂಡ್ ಇಲ್ಲಾ... ನಾವು ಯಾರಿಗೂ ಕಪ್ಪಕೊಡಬೇಕಿಲ್ಲ... ನಿವೇ ನಮ್ಮ ಹೈ ಕಮಾಂಡ್ ನೀವು ಹೇಳುವ ಕೆಲಸವನ್ನು ಮಾಡುವುದು ನಮ್ಮ ಕೆಲಸ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿಯಲ್ಲಿ  ಕುಮಾರಪರ್ವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

     ನಮ್ಮೆಲ್ಲಾ  ಅಭಿಮಾನಿಗಳ  ಆಶೀರ್ವಾದದಿಂದ ಬದುಕಿದ್ದೇನೆ... ಎರಡು ಬಾರಿ ಹೃದಯದ  ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ್ರೂ.. ಈ ಜೀವ ಬದುಕಿರೋದೇ ನಿಮ್ಮಗಳಿಗಾಗಿ... ನಾನು ಮುಖ್ಯಂತ್ರಿಯಾಗುವುದಿಲ್ಲ.... ಹೆಸರಿಗೆ ನಾನು... ನೀವೆಲ್ಲರೂ ಮುಖ್ಯಮಂತ್ರಿಗಳೇ....  ಈಗಾಗಲೇ ನಾನು ಮುಖ್ಯಮಂತ್ರಿಯಾಗಿದ್ದೇನೆ ಅದರ ಅರಿವು ನನಗಿದೆ... ನಿಮಗಾಗಿ ಮತ್ತೊಮ್ಮೆ ನಿಮ್ಮ ಬದುಕನ್ನು ಕಟ್ಟಿಕೊಡುವ ಸಲುವಾಗಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ.. ನನಗೊಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು. 

          ನಮ್ಮ ಪಕ್ಷ ಬಿಜೆಪಿಯ ಬಿ-ಟೀಮ್ ಎನ್ನುವ ಆರೋಪ ಮಾಡುತ್ತಿದ್ದಾರೆ ನಾವು ಯಾರ ಟೀಮೂ ಅಲ್ಲಾ... ನಾವು  ಸಾಮಾನ್ಯ ಜನರ   ಟೀಂ ಅದನ್ನು ಈ ಚುನಾವಣೆಯಲ್ಲಿ ನಮ್ಮ ಟೀಂ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ನಮ್ಮ ವಿರೋಧಿಗಳಿಗೆ ತಿಳಿಯಲಿದ್ದು... ಯಾರ್ಯಾರು ಯಾವ ಟೀಂ... ಎನೆಲ್ಲಾ ಮಾಡಬೇಕು ಅನ್ನುವುದನ್ನು ನಮ್ಮ ಟೀಮ್ ತಿಳಿಸಲಿದೆ ಎಂದು ಗುಡುಗಿದರು. 

       ಜೆಡಿಎಸ್ ಪಕ್ಷ ಕೇವಲ ಹಳೇ ಕರ್ನಾಟಕದಲ್ಲಿ ಅಲ್ಲ  ಈ ಬಾರಿ ಉತ್ತರ ಕರ್ನಾಟಕದಲ್ಲೂ ಹೆಚ್ಚು ಸ್ಥಾನ ಗೆಲ್ಲಲಿದ್ದು ಬೇರೆಲ್ಲಾ ಲೆಕ್ಕಾಚಾರ… ಮಾಧ್ಯಮದ ಲೆಕ್ಕಾಚಾರವನ್ನೆಲ್ಲಾ ನಾವು ಕ್ರಾಸ್ ಮಾಡಿ 113 ಸೀಟು ಗೆದ್ದಿದ್ದೇವೆ ಇನ್ನೇನಿದ್ದರೂ ರೈತರ... ಬಡವರ... ದೀನ ದಲಿತರ ಸರ್ಕಾರ ರಾಜ್ಯದಲ್ಲಿ ಉಳಿಯಲಿದೆ ಎಂದು ಭವಿಷ್ಯನುಡಿದರು. 

ನಾನು ಮುಖ್ಯಮಂತ್ರಿಯಲ್ಲ:-

ಈಗಾಗಲೇ ನಾನು ಮುಖ್ಯಂತ್ರಿಯಾಗಿದ್ದವನು… ನಾನು ಸತ್ತರೂ ಸಹ ಮಾಜಿ ಮುಖ್ಯಮಂತ್ರಿ ಎನ್ನುತ್ತಾರೆ ಆದರೆ ನಿಮ್ಮಲ್ಲರಿಗೋಸ್ಕರ ನಾನು ಆ ಮುಳ್ಳಿನ ಆಸಿಗೆಯ ಮೇಲೆ ಕುಳಿತುಕೊಳ್ಳಲು ಸಿದ್ದನಿದ್ದು  ನಿಮ್ಮಲ್ಲರಿಗಾಗಿ ನನ್ನ ಆರೋಗ್ಯವನ್ನು ಲೆಕ್ಕಿಸದೇ ಓಡಾಡುತ್ತಿದ್ದೇನೆ ಎಂದು ಭಾಹುಕರಾದರು.

ನನಗೆ ಯಾರ ಭಲವಿಲ್ಲ:-

ನನಗೆ ಯಾರ ಭಲವಿಲ್ಲ ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಇಳಿ ವಯಸ್ಸಿನಲ್ಲಿ ಪಕ್ಷಕ್ಕಾಗಿ ಓಡಾಡುತ್ತಿದ್ದು  ರೈತರಿಗಾಗಿ… ನಿರುದ್ಯೋಗಿಗಳಾಗಿರುವ ಯುವ ಜನತೆಗಾಗಿ ನಾನು ಹೋರಾಡುತ್ತಿದ್ದಾನೆ ದೇವೇಗೌಡರು ಕೇಳವ 10 ತಿಂಗಳ ಪ್ರಧಾನಿ, 18 ತಿಂಗಳು ಮುಖ್ಯಮಂತ್ರಿಯಾಗಿದ್ದರು ಅವರ ಎಷ್ಟೋ ಉತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿಲ್ಲ ನನ್ನ ಅವುಗಳನ್ನು ಪೂರೈಲು ಅನುವು ಮಾಡಿಕೊಡಿ ಎಂದರು.

ಹಣಕ್ಕೊಟ್ಟು ಕರೆಸೋದಿಲ್ಲ:-

ಬೇರೆ ಪಕ್ಷದವರು ನಮ್ಮ ಪಕ್ಷದ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಹಣ ನೀಡುತ್ತಿರುವ ವರದಿಗಳು ಎಲ್ಲೆಡೆ ಕೇಳಿಬರುತ್ತಿವೆ ಇದು ಜೆಡಿಎಸ್  ತಾಕತ್ತು… ನಮ್ಮ ಪಕ್ಷದ ಕಾರ್ಯಕರ್ತರನ್ನು ಹಣ ಕೊಟ್ಟು ಕಾರ್ಯಕ್ರಮಕ್ಕೆ  ಕರೆತರುವು ಅವಶ್ಯಕತೆಯಿಲ್ಲ ಬೇರೆ ಪಕ್ಷದವರು ಹಣ ನೀಡುವ ಮಟ್ಟಕ್ಕೆ ಜೆಡಿಎಸ್ ಇದೆ ಎಂದರು.

      ಶಾಸಕ ಪಿ.ಆರ್ ಸುಧಾಕರ್ ಲಾಲ್ ಮಾತನಾಡಿ  ನಾನು ಎಂದೂ ನಿಮ್ಮ ಮನೆಯ ಮಗನಾಗಿ ಕ್ಷೇತ್ರದಲ್ಲಿ ಇರುತ್ತೇನೆ...  ನಾನೊಬ್ಬ ಸಾಮಾನ್ಯ ಕುಟುಂಬದ  ಸದಸ್ಯ ನಿಮ್ಮಲ್ಲರ  ಆಶೀರ್ವಾದ... ಜೆಡಿಎಸ್ ಪಕ್ಷ ನನ್ನನ್ನು ಶಾಸಕನನ್ನಾಗಿ ಮಾಡಿದೆ... ನಾನೆಂದೂ ನಿಮ್ಮಲ್ಲರ ಸೇವೆಗಾಗಿಯೇ ಇರುತ್ತೇನೆ...  ಅರಸಿ.. ಆರೈಸಿ.. ನನ್ನನ್ನು ಈ ಬಾರಿ ಗೆಲ್ಲಿಸಿ ಮತ್ತೊಮ್ಮೆ ಕೊರಟಗೆರೆ ಕ್ಷೇತ್ರದ ಶಾಕನನ್ನಾಗಿ ಮಾಡಿ ಎಂದು ಮನವಿ ಮಾಡಿದರು. 

       ಕಾರ್ಯಕ್ರಮಮದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು,ಮಾಜಿ ಶಾಸಕ ಲಿಂಗಪ್ಪ, ಜಿ.ಪಂ ಸದಸ್ಯ ಶಿವರಾಮಯ್ಯ, ಪ್ರೇಮಾ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ, ವಕ್ತಾರ ಟಿ.ಸಿ ಲಕ್ಷ್ಮೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ಮಹಿಳಾ ಅಧ್ಯಕ್ಷ ಸಿದ್ದಗಂಗಮ್ಮ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಕಲೀಂಹುಲ್ಲಾ, ಮುಖಂಡರಾದ ರಂಗಪ್ಪ, ಹುಲೀಕುಂಟೆ ಶ್ರೀಧರ್, ಗಟ್ಲಹಳ್ಳಿ ಕುಮಾರ್,ಮಾವತ್ತೂರು ಮಂಜುನಾಥ್, ಸೈಪುಲ್ಲಾ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)

      

 

 

      

Edited By

Raghavendra D.M

Reported By

Raghavendra D.M

Comments