ನನ್ನ ಗುರಿ ಕ್ಷೇತ್ರದ ಜನತೆಗೆ ಶಾಶ್ವತ ಯೋಜನೆ ಅನುಷ್ಠಾನ : ಡಾ. ಜಿ ಪರಮೇಶ್ವರ್

07 May 2018 8:38 PM |
669 Report

ಕೊರಟಗೆರೆ ಮೇ. :- ಕ್ಷೇತ್ರದಲ್ಲಿ ಯಾವೊಂದು ಶಾಶ್ವತ ಯೋಜನೆ ಅನುಷ್ಠಾನಗೊಂಡಿಲ್ಲ ನನ್ನ ಗುರಿಯೇ ಕ್ಷೇತ್ರದಲ್ಲಿ ಇದನ್ನು ಅನುಷ್ಠಾನಗೊಳಿಸಬೇಕು ಎನ್ನುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಕಾಂಗ್ರೇಸ್ ಅಭ್ಯರ್ಥಿ ಡಾ.ಜಿ ಪರಮೇಶ್ವರ್ ತಿಳಿಸಿದರು.

    ದೊಡ್ಡಸಾಗ್ಗೆರೆ, ಬೊಮ್ಮಲದೇವಿಪು, ಹೂಳವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಮತಯಾಚನೆ ಮಾಡಿ ಮಾತನಾಡಿದರು.

      ಉದ್ಯಮಿಗಳ ಪರವಾಗಿ ಬಿಜೆಪಿ  ಸರ್ಕಾರವಿದೆ ಆದರೆ ಕಾಂಗ್ರೇಸ್ ಪಕ್ಷ ಸಾಮಾನ್ಯ ಜನರ ಪರವಾಗಿದೆ ನಾವು ದೈರ್ಯವಾಗಿ ಮತದಾರರ ಮುಂದೆ ನಿಂತ ನಮ್ಮ ಪಕ್ಷವನ್ನು ಬೆಂಬಲಿಸಿ ನಮಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಕೇಳುವಷ್ಟು ದೈರ್ಯ ನಮ್ಮಲ್ಲಿದೆ ಕಾರಣ ಪ್ರತಿಯೊಬ್ಬರೂ ನಮ್ಮನ್ನು ಸ್ವಾಗತಿಸುತ್ತಾರೆ, ನಮ್ಮ ಸರ್ಕಾರದ ಯೋಜನೆಗಳನ್ನು ನಮ್ಮ ಚಿಂತನೆಗಳನ್ನು ಅಭಿನಂದಿಸುತ್ತಿದ್ದಾರೆ ಎಂದರು.

     ಚುನಾವಣೆ ಹತ್ತಿರವಾದಂತೆ ಹಲವು ರೀತಿಯ ಗೊಂದಲ ಮತ್ತು ಆಮಿಷಗಳಿಂದ ನಿಮ್ಮನ್ನು ಬದಲಾಯಿಸಲು ಯತ್ನಿಸುತ್ತಾರೆ ಇದಾವುದಕ್ಕೂ ಅವಕಾಶ ಮಾಡಿಕೊಡಬೇಡಿ… ನಾವು 5 ವರ್ಷ ಸುಭದ್ರ ಸರ್ಕಾರ ಮಾಡಿದ್ದೇನೆ ಎಲ್ಲಾ ವರ್ಗದವರನ್ನೂ ಸಮಾನವಾಗಿ ಕಂಡು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದು  ಕೇವಲ ಒಂದು ಸಮುದಾಯದ ಓಲೈಕೆ ಮಾಡುವ ತಂತ್ರ ಕಾಂಗ್ರೇಸ್ ಪಕ್ಷಕ್ಕೆ ಅವಶ್ಯಕತೆಯಿಲ್ಲ ಎಂದರು.

        ಗೊಲ್ಲಹಳ್ಳಿ, ಚಿಕ್ಕಸಾಗ್ಗೆರೆ ,ಲಂಕೇನಹಳ್ಳಿ ,ಆಲಪ್ಪನಹಳ್ಳಿ ,  ದೊಡ್ಡಸಾಗ್ಗೆರೆ, ಅಕ್ಕಾಜ್ಜಿಹಳ್ಳಿ,ಚಿಕ್ಕಪಾಳ್ಯ,ಚಟ್ಟೆನಹಳ್ಳಿ,ತಿಗಳರಪಾಳರಪಾಳ್ಯ,ತೊಗರಿಘಟ್ಟ,ಕರಕಲಘಟ್ಟ,ಹೊಳವನಹಳ್ಳಿ   ಗ್ರಾಮಮಗಳಲ್ಲಿ ಪ್ರಚಾರ ಮಾಡಿದರು.

        ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ನಾರಾಯಣಮೂರ್ತಿ, ತಾ.ಪಂ ಸದಸ್ಯರಾದ ಟಿ.ಸಿ ರಾಮಯ್ಯ, ವೆಂಕಟಪ್ಪ, ಈರಣ್ಣ, ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಕಾರ್ಯದರ್ಶಿ, ಕವಿತಾ ಸೇರಿದಂತೆ ಇತರೆ ಮುಖಂಡರು ಇದ್ದರು.

Edited By

Raghavendra D.M

Reported By

Raghavendra D.M

Comments