ನಾನು ಹೊರಗಿನಿಂದ ಬಂದವನಲ್ಲ... ಕೊರಟಗೆರೆ ಕ್ಷೇತ್ರದಲ್ಲೇ ಹುಟ್ಟಿ ಇಲ್ಲೇ ಬೆಳೆದವನು : ಶಾಸಕ ಪಿ.ಆರ್ ಸುಧಾಕರ್ ಲಾಲ್

03 May 2018 8:25 PM |
2227 Report

ಕೊರಟಗೆರೆ:- ನಾನು ಚುನಾವಣೆಗಾಗಿ ಕೊರಟಗೆರೆಗೆ ಬಂದವನಲ್ಲ... ನನ್ನ ಹುಟ್ಟಿರೋದೇ ಕೊರಟಗೆರೆ ಕ್ಷೇತ್ರದಲ್ಲಿ... ನಾನು ಮತ್ತು ನನ್ನ ಬದುಕು ಇಲ್ಲೇ ನಿಮ್ಮಲ್ಲರ ನಡುವೆ ಬೆಳೆದಿದ್ದೇನೆ ನಿಮ್ಮೆಲ್ಲರ ಆಶಯದಿಂದ ನಾನು ರಾಜಕಾರಣಿಯಾಗಿದ್ದೇನೆ ನಾನು ನಿಮ್ಜಮ ಸೇವಕ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ತಾಲೂಕಿನ ಕೊಡಗದಾಲ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದ  ಮಾತನಾಡಿದರು.

       
      ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20ವರ್ಷದಿಂದ ಜಿಪಂ ಸದಸ್ಯ ಮತ್ತು ಶಾಸಕನಾಗಿ  ನೀವೇ  ಮಾಡಿದ್ದೀರಿ... ನಾನೊಬ್ಬ ಸಮಾನ್ಯ ಕುಟುಂಬದ ಸಾಮಾನ್ಯ ಹುಡುಗ  ನೀವೆಲ್ಲರೂ ಹರಸಿ ಬೆಳಸಿ ನನ್ನ ಈ ಸ್ಥಾನಕ್ಕೆ ತಂದಿದ್ದೀರಿ... ನಾನು ಎಂದೂ ನಿಮಗೆ ಚಿರರುಣಿ...  ನನ್ನನ್ನು   ನಿಮ್ಮಮ ನೆಮಗನ ರೀತಿಯಲ್ಲಿ ನೋಡುತಿದ್ದೀರಿ... ನಾನು   ಸದಾ   ನಿಮ್ಮ ಕಷ್ಟದಲ್ಲಿ  ಬಾಗಿಯಾಗುತ್ತೇನೆ...  2013ರ ಚುನಾವಣೆಯಲ್ಲಿ  ನನ್ನ  ಶಾಸಕನ್ನಾಗಿ ಮಾಡಿದಿರಿ ನಿಮ್ಮ ಸೇವೆಯನ್ನು ನಾನು ಮಾಡಿದ್ದೇನೆ ಈ ಬಾರಿಯೂ ಮತ್ತೊಂದು ಅವಕಾಶ ಮಾಡಿಕೊಡಬೇಕು ಎಂದು ನಿಮ್ಮ ಮನೆಯ ಮಗನಾಗಿ ಕೇಳಿಕೊಳ್ಳುತ್ತೇನೆ ಎಂದರು.

     ನೀವು   ನನ್ನ ಶಾಸಕನನ್ನಾಗಿ ಮಾಡಿದರ ಫಲವಾಗಿ ನಾನು ಪ್ರತೀ  ಸೋಮವಾರ ಕೊರಟಗೆರೆ ಪಟ್ಟಣದ ಶಾಸಕರ ಕಚೇರಿಯಲ್ಲಿ ಬಡಜನರಿಗೆ ಜನತಾ ದರ್ಶನದ ಮೂಲಕ ಕುಮಾರಣ್ಣನವರ ಆದರ್ಶವನ್ನು ಪಾಲಿಸಿದ್ದೇನೆ. ವಾರದ ನಾಲ್ಕು ದಿನ ಕ್ಷೇತ್ರದಲ್ಲಿನ ಸಮಸ್ಯೆಯನ್ನು ಆಲಿಸುವ ಮೂಲಕ ಪರಿಹಾರ ನೀಡಿದ್ದೇನೆ. ಮತ್ತೇರಡು ದಿನ ಕ್ಷೇತ್ರದ ಅಭಿವೃದ್ದಿಗಾಗಿ ಸರಕಾರದ ಸಚಿವರ ಗಮನ ಸೆಳೆಯುವ ಮೂಲಕ ಕ್ಷೇತ್ರಕ್ಕೆ ನೂರಾರು ಕೋಟಿ ಅನುಧಾನ ತಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮ ಹಾಕಿದ್ದೇನೆ  ಇದು  ನನ್ನ ಪಾಲಿನ ಬಾಗ್ಯ  ಎಂದು ಬಾವಿಸಿದ್ದೇನೆ ಎಂದು ಭಾವುಕರಾದರು.

    ಪುರವರ ಜಿಪಂ ಸದಸ್ಯ ಕೊಂಡವಾಡಿತಿಮ್ಮಯ್ಯ ಮಾತನಾಡಿ ಪರವಾರ ಹೋಬಳಿಗೆ ಕಳೆದ 30ವರ್ಷದಿಂದ ಆಗದೇ ಇರುವ ಕೆಲಸವನ್ನು ಶಾಸಕ ಸುಧಾಕರಲಾಲ್ ಅಭಿವೃದ್ದಿ ಮಾಡಿ ತೋರಿಸಿದ್ದಾರೆ. ರೈತರ ಅಭಿವೃದ್ದಿಗಾಗಿ ಸುಮಾರು 30ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ನಿಮರ್ಿಸುವ ಕೆಲಸ ಮಾಡಿದ್ದಾರೆ. ಸುವರ್ಣಮೂಖಿ ನದಿಗೆ ಅಡ್ಡಲಾಗಿ ಸುಮಾರು 22ಕೋಟಿ ವೆಚ್ಚದಲ್ಲಿ ಬ್ಯಾರೇಜ್ ಕಂ ಬ್ರೀಡ್ಞ್ ನಿರ್ಮಾಣ ಮಾಡುವ ಮೂಲಕ ರೈತರ ಅಭಿವೃದ್ದಿಗಾಗಿ ಹಗಳಿರುಲು ಶ್ರಮಿಸಿರುವ ನಾಯಕನನ್ನು ನಾವು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

     ಕೊಡಗದಾಲ ಮತ್ತು ಬ್ಯಾಲ್ಯ ಗ್ರಾಪಂ ವ್ಯಾಪ್ತಿಯ ಚನ್ನಸಾಗರ, ಬೈರವನಗರ, ಸುಣ್ಣವಾಡಿ, ಇ.ಜಿ.ಹಳ್ಳಿ, ಕೊಡಗದಾಲ, ಹೊಸಪಾಳ್ಯ, ನಂಜಾಪುರ, ನಿಟ್ರಹಳ್ಳಿ, ತಿಮ್ಮನಹಳ್ಳಿ, ಹಂದ್ರಹಾಳ, ಬ್ಯಾಲ್ಯ, ವಡ್ಡರಹಟ್ಟಿ, ಮುಳಬಾಗಿಲುಪಾಳ್ಯ, ಹನುಮಂತಪುರ, ಅಗ್ರಹಾರ, ಮುದ್ದಯ್ಯನಪಾಳ್ಯ, ಉಡುಮಲೋಟಿಪಾಳ್ಯ, ಬಡಚೌಡನಹಳ್ಳಿ ಮತಯಾಚನೆ ಮಾಡಿದರು.


     ಮತಯಾಚನೆ ವೇಳೆಯಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ಜೆ.ಎನ್  ನರಸಿಂಹರಾಜು,  ತಾಪಂ ಸದಸ್ಯರಾದ ವಿಜಯಮ್ಮ, ಸೌಭಾಗ್ಯಮ್ಮ, ಗೋಪಾಲಯ್ಯ, ಗ್ರಾಪಂ ಅಧ್ಯಕ್ಷೆ ಪವಿತ್ರ, ಉಪಾಧ್ಯಕ್ಷ ನರಸಿಯಪ್ಪ, ಜೆಡಿಎಸ್ ಮುಖಂಡರಾದ ಸತೀಶಕುಮಾರ್, ತಿಮ್ಮಾ, ಜಗದೀಶ್, ಕಾಂತರಾಜು, ಜಯರಾಂ, ಮಲ್ಲಿಕಾರ್ಜುನ್  ಅರುಣಕುಮಾರ್, ಮಂಜುನಾಥ, ರಮೇಶ್, ಹನುಮಂತರಾಯಪ್ಪ, ಶಿವರೆಡ್ಡಿ, ಉಗ್ರಪ್ಪ, ಜಿನೇಂದ್ರ, ಶಣ್ಮುಗಪ್ಪ, ಕುಮಾರ್, ರಂಗಣ್ಣ, ಗೋವಿಂದಪ್ಪ, ಚೌಡಪ್ಪ,  ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments