ಬೀದರ್‌ ಜಿಲ್ಲೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಲಿದೆ : ಬಂಡೆಪ್ಪ ಖಾಶೆಂಪುರ

13 Mar 2018 5:29 PM |
4420 Report

ಕೇಂದ್ರದ ಮಾಜಿ ಸಚಿವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರುಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಸಂಸದೀಯ ಮಂಡಳಿ ಅಧ್ಯಕ್ಷ ಬಂಡೆಪ್ಪ ಖಾಶೆಂಪುರ ಹೇಳಿದರು.

ಬೀದರ್‌ನಲ್ಲಿ ನಡೆದ ಜೆಡಿಎಸ್‌- ಬಿಎಸ್ಪಿ ಪಕ್ಷದ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಹಾಗೂ ಬಿಎಸ್ಪಿ ಮೈತ್ರಿಯಿಂದ ಇಡೀ ದೇಶಕ್ಕೆ ಒಂದು ಸಂದೇಶ ರವಾನೆಯಾಗಿದೆ ಎಂದು ಅವರು ತಿಳಿಸಿದರು. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ಅಶೋಕ ಖೇಣಿ ಅವರು 2100 ಕೋಟಿ ರೂ.ಗಳ ಕೆಲಸ ಮಾಡಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಇಷ್ಟು ಅನುದಾನ ನೀಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. 2100 ಕೋಟಿ ರೂ. ಯಾರಿಗೆ ಬಂದಿದೆ. ಎಲ್ಲಿಗೆ ಬಂದಿದೆ ಎಂದೂ ಕೇಳಿದರು. ಅಶೋಕ ಖೇಣಿ ಅವರು ಬೀದರ್‌ ದಕ್ಷಿಣ ಕ್ಷೇತ್ರವನ್ನು ಸಿಂಗಾಪುರವನ್ನಾಗಿಸುತ್ತೇನೆ ಎಂದಿದ್ದರು. ಆದರೆ, ಅವರಿಗೆ ಸಿಂಗಾಪುರ ಮಾಡಲು ಬೇಡ ಅಂದವರು ಯಾರು ಎಂದು ಕೇಳಿದರು. ಬೀದರ್‌ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಒಂದು ಸೀಟು ನಾವು ಹೆಚ್ಚಿಗೆ ಗೆಲ್ಲುತ್ತೇವೆ ಎಂದರು. ಈ ನೀಟಿನಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By

Shruthi G

Reported By

hdk fans

Comments