ನೂತನ ಪಕ್ಷ ನೋಂದಣಿ ಮಾಡಿಸಿದ ನಟ ಉಪೇಂದ್ರ

25 Apr 2018 3:09 PM | Politics
426 Report

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ಕೆಪಿಜೆಪಿ) ಹೊರಬಂದ ಬೆನ್ನಲ್ಲೇ ನಟ ಉಪೇಂದ್ರ ತಮ್ಮದೇ ಆದ ಹೊಸ ಪಕ್ಷದ ಹೆಸರನ್ನು ಇದೀಗ ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಉಪೇಂದ್ರ ಅವರು ತಮ್ಮ ಹೊಸ ಪಕ್ಷವಾದ  'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನು ನೋಂದಣಿ ಮಾಡಿಸಿರುವುದಾಗಿ ಟ್ವೀಟ್ ಮಾಡಿಕೊಂಡಿದ್ದಾರೆ. ದೆಹಲಿಯ ಕೇಂದ್ರ ಚುನಾವಣಾ ಆಯೋಗ ಕಚೇರಿಗೆ ತೆರಳಿರುವ ಉಪೇಂದ್ರ 'ಉತ್ತಮ ಪ್ರಜಾಕೀಯ ಪಾರ್ಟಿ'ಯ ನೋಂದಣಿ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ಇನ್ನು @nimmaupendra ಉಪೇಂದ್ರ ಪಕ್ಷ ಸ್ಥಾಪನೆ ಮಾಡಿದ್ದರೂ ಕೂಡ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಮುಕ್ತಾಯವಾಗಿದ್ದು, ಈಗೇನಿದ್ದರೂ ನಟ ಉಪೇಂದ್ರ ಪಕ್ಷ ಸಂಘಟನೆಗೆ ಮಾತ್ರ ಒತ್ತನ್ನು ನೀಡಬೇಕಿದೆ. ಹೊಸ ಪಕ್ಷ ಆರಂಭಿಸಲಿರುವ ಉಪೇಂದ್ರ, ಪಕ್ಷ ಸಂಘಟನೆಯ ಚಟುವಟಿಕೆಗೆ ಮುಂದಾಗಬೇಕಿದೆ. ಮುಂದೆ ಯಾವ ಯಾವ ಪಕ್ಷವನ್ನು ಉಪೇಂದ್ರ ಅವರು ಕಟ್ಟುತ್ತಾರೋ ನೋಡಬೇಕಿದೆ.

 

Edited By

Manjula M

Reported By

Manjula M

Comments