5 ನಿಮಿಷದಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ..

06 Feb 2019 3:01 PM | General
147 Report

ಇತ್ತಿಚಿನ ಕಾಲದಲ್ಲಿ ಯಾವುದೇ ಕೆಲಸಗಳು ಆಗಬೇಕು ಎಂದರೂ ಕೂಡ ಅದಕ್ಕೆ ಕೆಲವೊಂದಿಷ್ಟು ದಾಖಲೆಗಳು ತುಂಬಾ ಮುಖ್ಯ..ಅದರಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೂಡ ಒಂದು..ಆದರೆ ಅವುಗಳನ್ನು ಪಡೆಯಲು ಕೆಲವೊಮ್ಮೆ ಹರಸಾಹಸನೇ ಪಡಬೇಕಾಗುತ್ತದೆ… ಜಾತಿ, ಆದಾಯ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯುವುದೆಂದರೆ ಸಾಕಪ್ಪಾ ಸಾಕು ಎನಿಸಿಬಿಡುತ್ತದೆ.. ಎಷ್ಟು ಸಾರಿ ಅಲೆದರೂ ಕೂಡ ಪ್ರಮಾಣ ಪತ್ರಗಳು ಮಾತ್ರ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೆಲವೊಮ್ಮೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಸಾಕಾಗಿ ಹೋಗುತ್ತದೆ. ಅಲ್ಲದೆ ಜಾತಿ, ಆದಾಯ ಪ್ರಮಾಣಪತ್ರಗಳನ್ನು ಪಡೆಯಬೇಕೆಂದರೆ ಲಂಚ ಕೊಡಬೇಕಾಗುತ್ತದೆ. ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈಗಾಗಲೇ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ.

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ಕೊಟ್ಟು,  ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಪ್ಷನ್ ಆಯ್ಕೆಯನ್ನು ಮಾಡಬಹುದು. ಮೊದಲ ಹಂತದಲ್ಲಿ ನಾಡ ಕಚೇರಿ ವೆಬ್ಸೈಟ್ ಗೆ ಹೋಗುವ ಮೊದಲ ಹಂತದಲ್ಲಿಯೇ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಸಬೇಕಾಗುತ್ತದೆ.. ಅಂದರೆ Proceed ಮೇಲೆ ಕ್ಲಿಕ್ ಮಾಡಬೇಕು. ಮುಂದಿನ ಹಂತದಲ್ಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕಾಗುತ್ತದೆ..  ನ್ಯೂ ರಿಕ್ವೆಸ್ಟ್ (New Request) ಮೇಲೆ ಕ್ಲಿಕ್ ಮಾಡಿದ ನಂತರ ಹಲವಾರು ಸೇವೆಗಳ ಪಟ್ಟಿ ತೋರಿಸುತ್ತದೆ... ಅದರಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಆದಾಯ ಪತ್ರ ಬೇಕಿದ್ದರೆ Income Certificate ಮೇಲೆ ಕ್ಲಿಕ್ ಮಾಡಿ.   ಆದಾಯ ಪತ್ರಕ್ಕಾಗಿ ಆಪ್ಷನ್ ಆಯ್ಕೆ ಮಾಡಿದ ನಂತರ ಪ್ರಮಾಣಪತ್ರ ಬೇಕಿರುವುದು ಯಾವ ಭಾಷೆಯಲ್ಲಿ (certificate required) ಎಂಬ ಆಪ್ಷನ್ ತೋರಿಸುತ್ತದೆ.. ನಿಮಗೆ ಕನ್ನಡದಲ್ಲಿ ಬೇಕಿದ್ದರೆ Kannada ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ. ಐಈ ಹಂತದಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಪ್ರೋಸೀಡ್ ಕೊಡಬೇಕು. ರೂ. 20 ಶುಲ್ಕ ಪಾವತಿಸಿ ಕೊನೆಯಲ್ಲಿ ಆನ್ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಇದು ತುಂಬಾ ಸುಲಭವಾದ ವಿಧಾನವಾಗಿದೆ.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ

Edited By

Manjula M

Reported By

Manjula M

Comments