ಚಿಕನ್ ತಿನ್ನುವವರೇ ಎಚ್ಚರ: ಚಿಕನ್ ತಿಂದರೆ ನಿಮಗೂ ಬರಬಹುದು ಬಂಜೆತನ..!!!

17 Jan 2019 1:41 PM | General
1004 Report

ಕೆಲವರು ದಿನ ಹೇಳುತ್ತಿರುತ್ತಾರೆ.. ನಾನ್ ವೆಜ್ ತಿಂದಿಲ್ಲ ಅಂದ್ರೆ ದಿನ ಕಳೆಯೋದೆ ಇಲ್ಲ ಅಂತಾ… ಒಂದ್ ಹೊತ್ತು ತಿಂದ್ರೂ ಹೊಟ್ಟೆ ತುಂಬಾ ಕುರಿ ಕೋಳಿನೋ ತಿನ್ನಬೇಕು ಅಂತಾರೇ.. ಇನ್ನೂ ಕೆಲವರಂತೂ ಚಿಕನ್ ಅಂದರೆ ಪ್ರಾಣನೇ ಬಿಡ್ತಾರೆ.. ಮಾಂಸಹಾರಿಗಳು ಕಾಮನ್ ಆಗಿ ಹೆಚ್ಚಾಗಿ ಕೋಳಿಯನ್ನೆ ಇಷ್ಟ ಪಡ್ತಾರೆ.. ಆದರೆ ಮಾಂಸಹಾರಿಗಳು ಒಂದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು… ಕೋಳಿಯಾಗಲಿ ಅಥವಾ ಕುರಿ ಇನ್ನಿತರ ಮಾಂಸಹಾರಿ ಪ್ರಾಣಿಗಳು ಬೇಗ ಹೆಚ್ಚು ಇಳುವರಿ ಕೊಡಲೆಂದು ಸ್ಟೆರಾಯಿಡ್, ಇನ್ಸುಲಿನ್’ಗಳನ್ನು ನೀಡಿ ಬೆಳೆಸುತ್ತಾರೆ.. ಹಾಗಾಗಿ ಈ ರೀತಿಯಲ್ಲಿ ಬೆಳೆಯುವ ಫಾರಂ ಅಥವಾ ಬ್ರೈಲರ್ ಕೋಳಿಗಳು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ ಎಂದು ವೈದ್ಯರೆ ಹೇಳುತ್ತಾರೆ..  ಈ ರೀತಿಯ ಕೋಳಿಗಳನ್ನು ತಿನ್ನುವುದರಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ..

ಕೋಳಿ ತಿನ್ನುವುದರಿಂದ ಬರುವ ಕಾಯಿಲೆಗಳು ಯಾವುವು ಗೊತ್ತಾ..?

ಕ್ಯಾನ್ಸರ್ ಬರಬಹುದು: ಸ್ಟೆರಾಯಿಡ್ ಇಂಜೆಕ್ಷನ್ ಕೋಳಿಗಳನ್ನು ತಿನ್ನುವುದರಿಂದ ಮಹಿಳೆಯರ ಗರ್ಭಕೋಶದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು.. ಈ ಮಾಂಸ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ..ಹಾಗೇ ಕ್ಯಾನ್ಸರ್ ಕೂಡ ಬರಬಹುದು..

ಹಾರ್ಮೊನ್ಸ್ ಸಮತೋಲನವನ್ನು ಕಳೆದುಕೊಳ್ಳುತ್ತದೆ: ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ… ಈ ಕೋಳಿ ಮಾಂಸ ಸೇವನೆಯಿಂದ ಹೊಟ್ಟೆಯಲ್ಲಿ ಬೇಡದ ಮಾಂಸ ಬೆಳೆಯುವ ಸಾಧ್ಯತೆ ಇದೆ...ಹಾಗೂ ಇದರಿಂದ ಹೃದಯಾಘಾತವಾಗಬಹುದು…

ಸೋಂಕು ಬರುವ ಸಾಧ್ಯತೆ : ಕೋಳಿ ಮಿನಿಮಮ್ ಅಂದರೆ 10 ರಿಂದ 12 ವರ್ಷಗಳು ಬದುಕಬಹುದು.. ಅವುಗಳು ಪ್ರೌಡಾವಸ್ಥೆಗೆ ಬರಬೇಕಾದರೆ ಕನಿಷ್ಟ ಅಂದರೂ 90 ದಿನಗಳಾದರೂ ಬೇಕು… ಆದರೆ ಫಾರಂ ಕೋಳಿಗಳಿಗೆ 30 ರಿಂದ 45 ದಿನಗಳಲ್ಲಿ ತೂಕ ಹೆಚ್ಚಾಗುವಂತೆ ಇಂಜೆಕ್ಷನ್ ಕೊಡಲಾಗುತ್ತದೆ..

ಪುರುಷರಲ್ಲಿ ಬಂಜೆತನ: ಬಾಯ್ಲರ್ ಕೋಳಿಯಲ್ಲಿರುವ ರಾಸಾಯನಿಕಗಳನ್ನು ಸೇವಿಸುವ ಕಾರಣ ಪುರುಷನ ದೇಹದಲ್ಲಿರುವ ರಾಸಾಯನಿಕ ಕ್ರಿಯೆಯಿಂದ ಪುರುಷರಲ್ಲಿ ವೀರ್ಯದ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ..

ಕೋಳಿ ಮಾಂಸ ತಿನ್ನುವವರು ಏನಪ್ಪಾ ಹೀಗಾಯ್ತು, ಇನ್ ಮೇಲೆ ಕೋಳಿ ತಿನ್ನುವ ಆಗಿಲ್ಲ ಅಂತಾ ಯೋಚನೆ ಮಾಡುವ ಅವಶ್ಯಕತೆ ಇಲ್ಲ.. ಫಾರಂಕೋಳಿಗಳನ್ನು ತಿನ್ನುವ ಬದಲು ಒಳ್ಳೆಯ ನಾಟಿ ಕೋಳಿಗಳನ್ನು ತಿನ್ನಿ..

Edited By

Manjula M

Reported By

Manjula M

Comments