ಸಲ್ಲು ಅಭಿನಯದ ‘ಭಾರತ್’ ಸಿನಿಮಾ ವಿರುದ್ಧ ದಾಖಲಾಯ್ತು ದೂರು..!!

31 May 2019 3:51 PM | Entertainment
227 Report

ಸಿನಿಮಾಗಳಿಗೆ ಕಾಂಟ್ರೋವರ್ಸಿಗಳು ಎದುರಾಗುವುದು.. ಅದರಲ್ಲು ಸಿನಿಮಾದ ಹೆಸರು ಕೆಲವೊಮ್ಮೆ ಕಾಂಟ್ರೊವರ್ಸಿಗೆ ಗುರಿಯಾಗುತ್ತವೆ… ಇದೀಗ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ನಟಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಹೊಸವೊಂದು ಕಂಟಕ ಪ್ರಾರಂಭವಾಗಿದೆ.. ಈ ಸಿನಿಮಾದ ಟೈಟಲ್ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಈ ಅರ್ಜಿಯ ಪ್ರಕಾರ ಹೇಳುವುದಾದರೆ ಭಾರತ್ ಎಂಬ ಶೀರ್ಷಿಕೆ ಸಂವಿಧಾನದ ಸೆಕ್ಷನ್ 3ರ ಪ್ರಕಾರ ಕಾನೂನು ಬಾಹಿರವಾಗಿದೆ ಎಂದು ಹೇಳಲಾಗುತ್ತದೆ..  ನಮ್ಮ ದೇಶದ ಲಾಂಛನಗಳನ್ನು ಹಾಗೂ ಹೆಸರನ್ನು ಯಾವುದೇ  ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ‘ಭಾರತ್’ ಎಂಬ ಹೆಸರನ್ನು ಸಿನಿಮಾ ಟೈಟಲ್ ಆಗಿ ಬಳಸುವುದು ತಪ್ಪು ಎಂದು ಹೇಳಲಾಗಿದೆ. ‘ಭಾರತ್’ ಎಂಬ ಹೆಸರನ್ನು ಬಳಸಿರುವ ಕಾರಣ ಕೆಲವು ಸಂಭಾಷಣೆಗಳನ್ನು ಬದಲಾಯಿಸಬೇಕು. ‘ಭಾರತ್’ ಎಂಬ ಪಾತ್ರಧಾರಿಯನ್ನು ದೇಶಕ್ಕೆ ಹೋಲಿಕೆ ಮಾಡಿದಾಗ ಅದೂ ದೇಶದ ಜನರ ದೇಶಭಕ್ತಿಯ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತದೆ ಎಂದು ನಮೂದಿಸಲಾಗಿದೆ. ಒಟ್ಟಾರೆಯಾಗಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿರುವ ಸಮಯದಲ್ಲಿಯೇ ಭಾರತ್ ಸಿನಿಮಾಗೆ ಹೊಸ ಕಂಟಕ ಶುರುವಾಗಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

Edited By

Manjula M

Reported By

Manjula M

Comments