'ಕಾಸ್ಟಿಂಗ್ ಕೌಚ್' ನಟಿ ಶ್ರೀರೆಡ್ಡಿ ಮತ್ತೆ ಸುದ್ದಿಗೆ : ಈ ಬಾರಿ ಆಗಿದ್ದೇನು ಗೊತ್ತಾ..?!!!

23 Mar 2019 10:28 AM | Entertainment
482 Report

ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಇಡೀ ಟಾಲಿವುಡ್’ನ್ನೇ ನಡುಗಿಸಿದ ನಟಿ ಶ್ರೀ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಶ್ರೀ ರೆಡ್ಡಿಗೆ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಯ್ತು.  ಈ ಬಾರಿ ನಟಿ ಶ್ರೀ ರೆಡ್ಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಂದಹಾಗೇ ಈ ಬಾರಿ ಆಕೆ ಯಾವ ವಿವಾದದಕ್ಕೆ ಸಿಲುಕಿಲ್ಲ ಆದರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯಾಕೆ ಗೊತ್ತಾ...?0

Related image

ನಟಿ ಶ್ರೀ ರೆಡ್ಡಿ ಮನೆಗೆ ಇಬ್ಬರು ಅಪರಚಿತ ವ್ಯಕ್ತಿಗಳು ಬಂದು ಗಲಾಟೆ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲದೇ  ನನ್ನ  ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು, ಅವರನ್ನು ಶೀರ್ಘವಾಗಿ ಬಂಧಿಸಲು ವಳಸಾರ್ವಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಗೆ ಯತ್ನಿಸಿದ್ದವರನ್ನು ತಕ್ಷಣ ಬಂಧಿಸುವಂತೆ ಶ್ರೀರೆಡ್ಡಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.ಎರಡು ದಿನಗಳ ಹಿಂದಷ್ಟೇ ನಟ ಅಜಿತ್ ಕಂಡರೆ ನನಗೆ ಇಷ್ಟ. ನನಗೆ ಅವರ ಮೇಲೆ ಕ್ರಶ್ ಆಗಿದೆ. ಒನ್ ಸೈಡ್ ಲವ್ ಆಗಿದೆ. ಅವರ ಫೋಟೋ ನೋಡದೇ ನಾನು ಮಲಗುವುದಿಲ್ಲ ಅಂತೆಲ್ಲಾ ಬರೆದು ಶ್ರೀರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ್ರು. ನಟ ಅಜಿತ್ ಒಬ್ಬರು ಓರ್ವ ಉತ್ತಮ ವ್ಯಕ್ತಿ. ಅಭಿಮಾನಿಗಳನ್ನು ತುಂಬಾ ಪ್ರೀತಿಸ್ತಾರೆ ಅಂತೆಲ್ಲಾ ಶ್ರೀ ರೆಡ್ಡಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.ಇದು ನಟ ವಿಜಯ್ ಅಜಿತ್ ಅಭಿಮಾನಿಗಳಲ್ಲಿ ಕಿರಿಕಿರಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಶ್ರೀರೆಡ್ಡಿ ವಿರುದ್ದ ಅಜಿತ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ರು. ಆದಾದ ಎರಡು ದಿನಗಳ ಬಳಿಕ, ಅಂದ್ರೆ ನಿನ್ನೆ ಇಬ್ಬರು ಅಪರಿಚಿತರು ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಅಂತಾ ಶ್ರೀರೆಡ್ಡಿ ದೂರು ದಾಖಲಿಸಿದ್ದಾರೆ.

Edited By

Kavya shree

Reported By

Kavya shree

Comments